DMK ಸರ್ಕಾರದ ಜಾಹೀರಾತಿನಲ್ಲಿ ಚೀನಾ! ಕಿಡಿಕಾರಿದ ಮೋದಿ!

masthmagaa.com:

ತಮಿಳುನಾಡು ಸರ್ಕಾರದ ಜಾಹೀರಾತು ಒಂದರ ವಿಚಾರವಾಗಿ ಇದೀಗ ಪಿಎಂ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ತಮಿಳುನಾಡು ಸರ್ಕಾರವನ್ನ ತರಾಟೆಗೆ ತೆಗೆದ್ಕೊಂಡಿದ್ದಾರೆ. ಹಾಗಾದ್ರೆ ಸರ್ಕಾರ ನೀಡಿರೋ ಜಾಹೀರಾತಿನಲ್ಲಿ ಅತಂದೇನಿದ್ಯಪ್ಪ ಅಂದ್ರೆ…. ಚೀನಾ ದೇಶದ ಭಾವುಟವನ್ನ ತಮ್ಮ ಆ್ಯಡ್‌ನಲ್ಲಿ ಬಳಸ್ಬಿಟ್ಟಿದ್ದಾರೆ. ಎಸ್‌… ತಮಿಳುನಾಡಿನಲ್ಲಿ ಇಸ್ರೋದ ಹೊಸ ಸ್ಪೇಸ್‌ಪೋರ್ಟ್‌ ಬಗ್ಗೆ ಮಾಡಲಾದ ಅಲ್ಲಿನ ರಾಜ್ಯ ಸರ್ಕಾರದ ಆ್ಯಡ್‌ನಲ್ಲಿ ರಾಕೆಟ್‌ನ ಫೋಟೋ ಒಂದನ್ನ ಬಳಸಲಾಗಿತ್ತು. ಆ ರಾಕೆಟ್‌ಗೆ ಹೋಗಿ ಹೋಗಿ ಚೀನಾ ಫ್ಲ್ಯಾಗ್‌ನ್ನ ಅಂಟಿಸ್ಬಿಟ್ಟಿದ್ದಾರೆ. ತಮಿಳುನಾಡು ಇರೋದು ಭಾರತದಲ್ಲಿ.. ಇಸ್ರೋ ಸಂಸ್ಥೆ ಭಾರತದ್ದು… ಸ್ಪೇಸ್‌ಪೋರ್ಟ್‌ ಆಗಲಿರೋದೂ ಭಾರತದಲ್ಲೇ.. ಆ ಆ್ಯಡ್‌ ಕೂಡ ಭಾರತದ ಸ್ಪೇಸ್‌ ಪ್ರಾಜೆಕ್ಟ್‌ನ್ನ ಪ್ರಮೋಟ್‌ ಮಾಡೋಕೆ ಮಾಡಿರುವಂತದ್ದು. ಆದ್ರೆ ತಮಿಳುನಾಡಿನ ಸರ್ಕಾರ ಅದ್ಯಾಕೆ ಭಾರತದ ಬದ್ಧ ವೈರಿ ಚೀನಾ ಫ್ಲ್ಯಾಗ್‌ ಹಾಕ್ತೋ ಗೊತ್ತಿಲ್ಲ. ಏನೇ ಇರ್ಲಿ…. ಪ್ರಧಾನಿ ಮೋದಿ ಮಾತ್ರ ಈ ವಿಚಾರವಾಗಿ ತಮಿಳುನಾಡು ಸರ್ಕಾರವನ್ನ ತೀವ್ರವಾಗಿ ಖಂಡಿಸಿದ್ದಾರೆ. ʻಡಿಎಮ್‌ಕೆ ಸರ್ಕಾರ ಭಾರತದ ಅಭಿವೃದ್ಧಿಯನ್ನ ಗುರುತಿಸೋಕೆ ರೆಡಿಯಿಲ್ಲ. ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಗ್ತಿರೋ ಬೆಳವಣಿಗೆ ನೋಡೋಕೆ ಅವ್ರಿಗೆ ಇಷ್ಟವಿಲ್ಲ. ಅವ್ರು ಭಾರತದ ಭಾವುಟ ಬದಲಿಗೆ ಚೀನಾ ಭಾವುಟ ಬಳಸಿ, ನಮ್ಮ ವಿಜ್ಞಾನಿಗಳನ್ನ ಅವಮಾನಿಸಿದ್ದಾರೆ. ಡಿಎಮ್‌ಕೆ ಸರ್ಕಾರಕ್ಕೆ ಕೆಲಸ ಮಾಡೋಕಾಗಲ್ಲ… ಆದ್ರೆ ಬೇರೆಯವ್ರ ಕೆಲಸಕ್ಕೆ ಕ್ರೆಡಿಟ್‌ ತಗೊಳೋಕೆ ಮಾತ್ರ ಚೆನ್ನಾಗ್‌ ಗೊತ್ತಿದೆ. ನಮ್ಮ ಸ್ಕೀಮ್‌ಗೆ ಅವ್ರ ಸ್ಟಿಕ್ಕರ್‌ ಹಾಕಿದ್ದಾರೆ. ಇಸ್ರೋ ಲಾಂಚ್‌ಪ್ಯಾಡ್‌ ಯೋಜನೆಯ ಕ್ರೆಡಿಟ್‌ ತಗೊಳೋದಕ್ಕೆ ಚೀನಾ ಭಾವುಟವನ್ನ ಪೇಸ್ಟ್‌ ಮಾಡಿದ್ದಾರೆʼ ಅಂತ ಕಿಡಿಕಾರಿದ್ದಾರೆ. ಅಷ್ಟೇ ಅಲ್ದೇ ತಮಿಳುನಾಡು ಸರ್ಕಾರದ ಜಾಹೀರಾತು ವಿರುದ್ಧ ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಕೂಡ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply