ದೆಹಲಿ ವಕ್ಫ್‌ ಮಂಡಳಿಗೆ ಕಾಂಗ್ರೆಸ್‌ ನೀಡಿದ್ದ ಪ್ರಾಪರ್ಟಿಗಳನ್ನ ವಾಪಾಸ್‌ ಪಡೆಯೋಕೆ ಮುಂದಾದ ಕೇಂದ್ರ ಸರ್ಕಾರ!

masthmagaa.com:

ದೆಹಲಿಯ ವಕ್ಫ್‌ ಮಂಡಳಿಯ 123 ಆಸ್ತಿಗಳನ್ನ ಸ್ವಾಧೀನಪಡಿಸಿಕೊಳ್ಳೋಕೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮುಂದಾಗಿದೆ. ಆಸ್ತಿಗಳಲ್ಲಿ ಮಸೀದಿಗಳು, ದರ್ಗಾಗಳು ಮತ್ತು ಸ್ಮಶಾನಗಳು ಸೇರಿದ್ದು, ಇವುಗಳನ್ನ 2014ರ ಲೋಕಸಭೆ ಎಲೆಕ್ಶನ್‌ಗೂ ಮೊದಲು ಕಾಂಗ್ರೆಸ್‌ ವಕ್ಫ್‌ ಮಂಡಳಿಗೆ ನೀಡಿತ್ತು. ಇತ್ತ ನಾವು ಈಗಾಗಲೇ 123 ವಕ್ಫ್ ಆಸ್ತಿಗಳ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದೇವೆ. ನಮ್ಮ ರಿಟ್ ಅರ್ಜಿ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಈ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ನಿಮ್ಮೆಲ್ಲರ ಮುಂದಿದೆ. ವಕ್ಫ್ ಮಂಡಳಿಯ ಆಸ್ತಿಯನ್ನು ಯಾವುದೇ ರೀತಿಯ ಅತಿಕ್ರಮಣಕ್ಕೆ ನಾವು ಅನುಮತಿ ನೀಡೋದಿಲ್ಲ ಅಂತ ವಕ್ಫ್ ಮಂಡಳಿ ಅಧ್ಯಕ್ಷ ಹಾಗೂ ಆಪ್‌ ಶಾಸಕ ಅಮಾನತುಲ್ಲಾ ಖಾನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply