‌ಶೀಘ್ರ ಮೋದಿ-HDK ಬಿಗ್‌ ಮೀಟ್?

masthmagaa.com:

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಅನ್ನೊ ಮಾತುಗಳು ಕೇಳಿ ಬರ್ತಿವೆ. ಇದರ ಬೆನ್ನಲ್ಲೇ ಜುಲೈ 18ರಂದು ನಡೆಯಲಿರುವ NDA ಮೈತ್ರಿ ಕೂಟಗಳ ಸಭೆಯಲ್ಲಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವ್ರು ಭಾಗವಹಿಸಲಿದ್ದಾರೆ ಅಂತ ಹೇಳಲಾಗ್ತಿದೆ. ಮೊನ್ನೆಯಷ್ಟೆ ವಿಧಾನಸಭೆಯಲ್ಲಿ ಪ್ರಧಾನಿ ಮೋದಿಯವರ ಜೊತೆ 4 ವರ್ಷಗಳ ಹಿಂದಿನ ಮಾತುಕತೆ ಬಗ್ಗೆ ಕುಮಾರಸ್ವಾಮಿ ಮಾತಾಡಿದ್ರು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಬಹುದು ಅನ್ನೊ ಚರ್ಚೆ ಹುಟ್ಟು ಹಾಕಿದೆ.

-masthmagaa.com

Contact Us for Advertisement

Leave a Reply