ಮಾಲ್ಡೀವ್ಸ್‌ನಿಂದ ಹೊರ ನಡೆದ ಎರಡನೇ ಹಂತದ ಭಾರತೀಯ ಸೇನೆ!

masthmagaa.com:

ಭಾರತ-ಮಾಲ್ಡೀವ್ಸ್‌ ಬಿಕ್ಕಟ್ಟಿನ ನಂತ್ರ ಮಾರ್ಚ್‌ 11ರಂದು ಮೊದಲ ಹಂತದ ಭಾರತೀಯ ಸೇನಾ ಪಡೆಗಳು ದ್ವೀಪ ರಾಷ್ಟ್ರವನ್ನ ಬಿಟ್ಟು ಭಾರತಕ್ಕೆ ವಾಪಸ್‌ ಆಗಿದ್ರು. ಇದೀಗ ಏಪ್ರಿಲ್‌ 9ರಂದು ಎರಡನೇ ಹಂತದಲ್ಲಿ ಭಾರತೀಯ ಸೇನಾ ಪಡೆಗಳು ಮಾಲ್ಡೀವ್ಸ್‌ನಿಂದ ಹೊರ ನಡೆದಿದ್ದಾರೆ. ಹೀಗಂತ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು ಪ್ರಚಾರ ಕಾರ್ಯಕ್ರಮವೊಂದ್ರಲ್ಲಿ ಮಾತನಾಡ್ತಿರೋವಾಗ ಅನೌನ್ಸ್‌ ಮಾಡಿದ್ದಾರೆ. ʻಮೊದಲ ಭಾರತೀಯ ಸೇನಾ ಪಡೆಗಳ ತಂಡ ಆಲ್ರೆಡಿ ಹೋಗಿ ಆಗಿದೆ. ಇದೀಗ ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿರೋ ಭಾರತೀಯ ಸೇನಾ ಪಡೆಗಳು ಏಪ್ರಿಲ್‌ 9ರಂದು ಇಲ್ಲಿಂದ ಹೋಗಿದ್ದಾರೆ. ಸೋ ಈಗ ಒಂದೇ ಒಂದು ಪ್ಲಾಟ್‌ಪಾರ್ಮ್‌ ಉಳಿದಿರೋದು. ಮೇ 10ರೊಳಗೆ ಈ ಕೊನೆಯ ಪ್ಲಾಟ್‌ಫಾರ್ಮ್‌ನಲ್ಲಿರೋ ಭಾರತೀಯ ಸೇನಾ ಪಡೆಗಳು ಕೂಡ ವಾಪಸ್‌ ಭಾರತ ಸೇರಲಿದ್ದಾರೆ. ಆದ್ರಿಂದ ನಾನು ಮಾಡಿರೋ ಪ್ರತಿಜ್ಞೆ ಈಡೇರಿದೆ..ಅಲ್ವಾ? ಅಂತೇಳಿದ್ದಾರೆ. ಆದ್ರೆ ಭಾರತಕ್ಕೆ ವಾಪಸ್‌ ಹೋಗಿರೋ ಭಾರತೀಯ ಸೇನಾ ಪಡೆಗಳ ಬದಲಿಗೆ ಭಾರತದ ಟೆಕ್ನಿಕಲ್‌ ತಂಡವನ್ನ ನೇಮಿಸಲಾಗಿದ್ಯ ಅನ್ನೋದ್ರ ಬಗ್ಗೆ ಮುಯಿಝು ಯಾವ್ದೇ ರೀತಿ ಕಮೆಂಟ್‌ ಮಾಡಿಲ್ಲ. ಇನ್ನು ಏಪ್ರಿಲ್‌ 09ರಂದು ಮಾಲ್ಡೀವ್ಸ್‌ನಿಂದ ಭಾರತೀಯ ಸೇನಾ ಪಡೆಗಳು ವಾಪಸ್ಸಾಗಿರೋ ಬಗ್ಗೆ ಮಾಲ್ಡೀವ್ಸ್‌ನ ರಕ್ಷಣಾ ಸಚಿವಾಲಯ ಮತ್ತು ಭಾರತ ಸದ್ಯ ಯಾವ್ದೇ ರೀತಿಯ ಹೇಳಿಕೆಯೂ ನೀಡಿಲ್ಲ.

-masthmagaa.com

Contact Us for Advertisement

Leave a Reply