ಸುಡಾನ್‌ ಸಂಘರ್ಷ: ಒಂದೇ ನಗರದಲ್ಲಿ 800 ಜನರ ಹತ್ಯೆ!

masthmagaa.com:

ಕಳೆದ ಏಪ್ರಿಲ್‌ನಲ್ಲಿ ಸುಡಾನ್‌ನಲ್ಲಿ ಪ್ರಾರಂಭಗೊಂಡ ಸಂಘರ್ಷದ ಕುರಿತು ಇದೀಗ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷದಿಂದ ಸುಡಾನ್‌ನಲ್ಲಿ ಕಳೆದ 6 ತಿಂಗಳಲ್ಲಿ 800ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 48 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಅಂತ ತಿಳಿಸಿದೆ. ಅಂದ್ಹಾಗೆ ಈ ಸಂಘರ್ಷ ಸುಡಾನ್‌ನ ಪಶ್ಚಿಮ ಡಾಫರ್‌ ಪ್ರದೇಶದ ಅರ್ದಮಾಟಾದಲ್ಲಿ ನಡೆಯುತ್ತಿದೆ. ʻಸುಡಾನ್‌ನ ಡಾರ್ಫರ್‌ ಪ್ರದೇಶದಾದ್ಯಂತ ಹೆಚ್ಚುತ್ತಾ ಇರೋ ಹಿಂಸಾಚಾರ, ಇಲ್ಲಿ ಎರಡು ದಶಕಗಳ ಹಿಂದೆ ನಡೆದ ದೌರ್ಜನ್ಯಗಳನ್ನ ಮರುಕಳಿಸುವಂತಹ ಆತಂಕ ಹುಟ್ಟು ಹಾಕಿದೆ. ಈ ಸಂಘರ್ಷದಲ್ಲಿ ಸುಡಾನ್‌ನ ಡಾಫರ್‌ ಪ್ರದೇಶದಾದ್ಯಂತ ಸುಮಾರು 100 ಶೆಲ್ಟರ್‌ಗಳ ನೆಲಸಮಗೊಂಡಿದೆ. ವಿಶ್ವ ಮಾನವ ಹಕ್ಕುಗಳ ಆಯೋಗ ಕಳಿಸಿದ್ದ ಪರಿಹಾರ ವಸ್ತುಗಳನ್ನ ಕೂಡ ಲೂಟಿ ಮಾಡಲಾಗಿದೆ. ಇನ್ನು ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗೆ ಅರ್ದಮಾಟಾದಲ್ಲಿ ಕ್ಯಾಂಪ್‌ ವ್ಯವಸ್ಥೆಯನ್ನ ಮಾಡಿಕೊಡಲಾಗಿದೆ ಅಂತ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್‌ ತಿಳಿಸಿದೆ. ಜೊತೆಗೆ ಅಂದ್ಹಾಗೆ 20 ವರ್ಷಗಳ ಹಿಂದೆ ಡಾಫರ್‌ನಲ್ಲಿ ನಡೆದ ಭೀಕರ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಿಂದ ಸಾವಿರಾರು ಜನರ ಹತ್ಯೆಯಾಗಿತ್ತು. ಇದ್ರಿಂದ ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ರು.

-masthmagaa.com

Contact Us for Advertisement

Leave a Reply