ಕರ್ನಾಟಕ ವಿಧಾನಸಭಾ ಚುನಾವಣೆ: ಮಹಿಳಾ ಮತದಾರರೇ ಹೆಚ್ಚು

masthmagaa.com:

ಇನ್ನೇನು ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದೆ. ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ 112 ಅಥ್ವಾ 50% ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದಾರೆ ಅಂತ ಚುನಾವಣಾ ಆಯೋಗ ರಿಲೀಸ್‌ ಮಾಡಿರುವ ಅಂಕಿ ಅಂಶದಿಂದ ತಿಳಿದುಬಂದಿದೆ. ಮಹಿಳಾ ಮತದಾರರ ಸಂಖ್ಯೆ 2.67 ಕೋಟಿಯಿದ್ರೆ, ಪುರುಷ ಮತದಾರರ ಸಂಖ್ಯೆ 2.64 ಕೋಟಿಯಿದೆ. ಅಲ್ದೆ ವೋಟರ್ಸ್‌ ಜೆಂಡರ್‌ ರೇಷಿಯೋದಲ್ಲೂ ಸುಧಾರಣೆ ಕಂಡು ಬಂದಿದ್ದು, 1 ಸಾವಿರ ಪುರುಷ ಮತದಾರರಿಗೆ 989 ಮಹಿಳಾ ಮತದಾರರಿದ್ದಾರೆ. ಇದಕ್ಕಿಂತ ಮೊದಲು ಈ ಸಂಖ್ಯೆ 973 ಇತ್ತು.

-masthmagaa.com

Contact Us for Advertisement

Leave a Reply