ಯುದ್ಧಪೀಡಿತ ಯುಕ್ರೇನ್‌ನ 7 ಲಕ್ಷ ಮಕ್ಕಳಿಗೆ ಆಶ್ರಯ ನೀಡಿದ್ದೇವೆ: ರಷ್ಯಾ

masthmagaa.com:

ರಷ್ಯಾ – ಯುಕ್ರೇನ್‌ ಯುದ್ಧ ಕಂಟಿನ್ಯೂ ಆಗಿದ್ದು ದಾಳಿ ಪ್ರತಿದಾಳಿಗಳು ನಡೆಯುತ್ತಿವೆ. ಯುದ್ಧಪೀಡಿತ ಯುಕ್ರೇನ್‌ನಿಂದ ಸುಮಾರು 7 ಲಕ್ಷ ಮಕ್ಕಳನ್ನ ರಷ್ಯಾಗೆ ಕರೆತರಲಾಗಿದೆ ಅಂತ ರಷ್ಯಾ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಅಂದ್ರೆ ಯುದ್ಧ ಶುರುವಾದಾಗಿಂದ ಇಲ್ಲಿಯವರೆಗೆ ಸುಮಾರು 7 ಲಕ್ಷ ಯುಕ್ರೇನ್‌ನ ಮಕ್ಕಳು ಶೆಲ್‌ದಾಳಿ ಹಾಗೂ ಸ್ಫೋಟಕಗಳ ದಾಳಿಗಳಿಂದ ತಪ್ಪಿಸಿಕೊಂಡು ಬಂದು ನಮ್ಮ ಬಳಿ ಆಶ್ರಯ ಪಡೆದುಕೊಂಡಿದ್ದಾರೆ ಅಂತ ರಷ್ಯಾ ಸಂಸತ್ತಿನ ಅಂತಾರಾಷ್ಟ್ರೀಯ Federation Council ಮುಖ್ಯಸ್ಥ ಗ್ರಿಗೊರಿ ಕೆರಾಸಿನ್‌ ಅವ್ರು ತಿಳಿಸಿದ್ದಾರೆ. ಇನ್ನು ಅನಾಥ ಹಾಗೂ ಯುದ್ಧದಲ್ಲಿ ತಪ್ಪಿಸಿಕೊಂಡು ಬಂದ ಯುಕ್ರೇನ್‌ ಮಕ್ಕಳಿಗೆ ರಷ್ಯಾದಲ್ಲಿ ಆಶ್ರಯ ನೀಡೋದು ರಷ್ಯಾದ ಯೋಜನೆಯಾಗಿದೆ ಅಂತ ರಷ್ಯಾ ಹೇಳಿದೆ. ಇನ್ನೊಂದು ಕಡೆ ಅಕ್ರಮವಾಗಿ ಹಾಗೂ ಬಲವಂತವಾಗಿ ಮಕ್ಕಳನ್ನ ರಷ್ಯಾ ಎಳದುಕೊಂಡು ಹೋಗ್ತಿದೆ ಅಂತ ಅಮೆರಿಕ ಹಾಗೂ ಯುಕ್ರೇನ್‌ ಆರೋಪ ಮಾಡಿವೆ.

-masthmagaa.com

Contact Us for Advertisement

Leave a Reply