ಜೊಡೊ ಯಾತ್ರೆಯಲ್ಲಿ ಕೆಜಿಎಫ್‌ 2 ಹಾಡು, ರಾಹುಲ್‌ ವಿರುದ್ಧ ಪ್ರಕರಣ ದಾಖಲು!

masthmagaa.com:

ಕಾಂಗ್ರೆಸ್‌ನ ಭಾರತ್‌ ಜೋಡೊ ಯಾತ್ರೆಯಲ್ಲಿ ಕೆಜಿಎಫ್‌ 2 ಚಿತ್ರದ ಹಾಡನ್ನ ದುರ್ಬಳಕೆ ಮಾಡಿದ್ದಾಗಿ ರಾಹುಲ್‌ ಗಾಂಧಿ ವಿರುದ್ಧ ಫೋರ್ಜರಿ ಕೇಸ್‌ ದಾಖಲಿಸಲಾಗಿದೆ. ಜೊತೆಗೆ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಮತ್ತು ಸುಪ್ರಿಯಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇನ್ನು ಇದರಲ್ಲಿ ಭಾರತ್‌ ಜೋಡೊ ಯಾತ್ರೆಯಲ್ಲಿ ಹಿಂದಿ ವರ್ಷನ್‌ನ ಸುಲ್ತಾನ್‌ ಹಾಡನ್ನ ಬಳಸೋಕೆ MRT ಮ್ಯೂಸಿಕ್‌ನಿಂದ ಕಾಪಿರೈಟ್‌ ಪಡೆದಿಲ್ಲ ಅಂತ ಆರೋಪಿಸಲಾಗಿದೆ. MRT ಮ್ಯೂಸಿಕ್‌ ಕೆಜಿಎಫ್‌ 2 ಹಿಂದಿ ಹಾಡುಗಳ ಕಾಪಿರೈಟ್‌ ಹಕ್ಕು ಹೊಂದಿದೆ.

-masthmagaa.com

Contact Us for Advertisement

Leave a Reply