ಅಂಬಾನಿ ಪಾಲಾಗುತ್ತಾ ಪೇಟಿಎಂ? ವ್ಯಾಲೆಟ್‌ ಮೇಲೆ ಎಲ್ಲರ ಕಣ್ಣು!

masthmagaa.com:

ಭಾರತದ ಫಿನ್‌ಟೆಕ್‌ ಕ್ಷೇತ್ರದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿರೋ ಪೇಟಿಎಂ ಪ್ರಕರಣದಲ್ಲಿ ಈಗ ಮತ್ತೊಂದು ಬೆಳವಣಿಗೆ ಆಗಿದೆ. ಪೇಟಿಎಂ ತನ್ನ ವ್ಯಾಲೆಟ್‌ ಬ್ಯುಸಿನೆಸ್‌ನ ಮಾರೋಕೆ ಮುಂದಾಗಿದೆ. ಅದನ್ನ ಖರೀದಿ ಮಾಡೋದ್ರಲ್ಲಿ ಈಗ ರಿಲಾಯನ್ಸ್‌ ಬಾಸ್‌ ಮುಖೇಶ್‌ ಅಂಬಾನಿ ಮುಂಚೂಣಿಯಲ್ಲಿದಾರೆ ಎನ್ನಲಾಗಿದೆ. ತರಕಾರಿಯಿಂದ ತೈಲದೊರೆಗಿನ ಒಡೆಯ ರಿಲಾಯನ್ಸ್‌, ತನ್ನ ಹೊಸ ಜಿಯೋ ಫಿನಾನ್ಷಿಯಲ್‌ ಸರ್ವೀಸಸ್‌ನಲ್ಲಿ ಪೇಟಿಎಂ ವ್ಯಾಲೆಟ್‌ನ ವಿಲೀನ ಮಾಡ್ಕೊಳೋಕೆ ಇಂಟರೆಸ್ಟ್‌ ತೋರಿಸಿದೆ. ಈ ವಿಚಾರವನ್ನ ದೇಶದ ಪ್ರಮುಖ ಪತ್ರಿಕೆ ʻದಿ ಹಿಂದೂʼ ವರದಿ ಮಾಡಿದೆ. ಜಿಯೋ ಫಿನಾನ್ಸ್‌ ಜೊತೆಗೆ HDFC ಕೂಡ ಪೇಟಿಎಂ ವ್ಯಾಲೆಟ್‌ ಖರೀದಿಸೋಕೆ ಮುಂದೆ ಬಂದಿದೆ ಎನ್ನಲಾಗಿದೆ. ಈ ಸುದ್ದಿ ವರದಿಯಾಗ್ತಿದ್ದಂತೆ ಇವತ್ತು ಜಿಯೋ ಫಿನಾನ್ಸ್‌ ಶೇರುಗಳು 13.91% ಏರಿಕೆ ಕಂಡಿವೆ. ಒಂದೇ ದಿನ ಶೇರಿನ ಬೆಲೆ ₹35 ಜಂಪ್‌ ಆಗಿದೆ. ಒಂದು ಹಂತದಲ್ಲಂತೂ 16% ರೈಸ್‌ ಆಗಿದ್ವು…

ಅಂದ್ಹಾಗೆ ಕಳೆದ ವರ್ಷ ಫಿನಾನ್ಸ್‌ ಕ್ಷೇತ್ರದಲ್ಲೂ ದೊಡ್ಡ ಕಂಪನಿ ಹುಟ್ಟಿಹಾಕೋ ಮಹಾತ್ವಾಕಾಂಕ್ಷೆಯಲ್ಲಿ ಜಿಯೋ ಫಿನಾನ್ಸ್‌ ರಿಲಾಯನ್ಸ್‌ನಿಂದ ಪ್ರತ್ಯೇಕವಾಗಿತ್ತು. ಬಳಿಕ ಅಗಸ್ಟ್‌ನಲ್ಲಿ ಸ್ಟಾಕ್‌ ಮಾರ್ಕೆಟ್‌ಗೂ ಎಂಟ್ರಿ ಕೊಟ್ಟಿತ್ತು. ಆದ್ರೆ ಪೇಮೆಂಟ್ಸ್‌ ಬ್ಯಾಂಕ್‌ ಕ್ಷೇತ್ರದಲ್ಲಿ ಜಿಯೋಗೆ ಅಂದುಕೊಂಡಂತಹ ಓಪನಿಂಗ್‌ ಸಿಕ್ಕಿರ್ಲಿಲ್ಲ. ಇದೆ ವೇಳೆ KYC ವಿಚಾರವಾಗಿ ಪೇಟಿಎಂ ಕೂಡ ತನ್ನ ವ್ಯಾಲೆಟ್‌ ವ್ಯವಹಾರವನ್ನ ಸ್ಲೋ ಮಾಡಿತ್ತು. ಹೀಗಾಗಿ ಕಳೆದ ನವೆಂಬರ್‌ನಿಂದಲೇ ಪೇಟಿಎಂ, ವ್ಯಾಲೆಟ್‌ ಬ್ಯುಸಿನೆಸ್‌ನ ಜಿಯೋ ಕೈಗೆ ಒಪ್ಪಿಸೋಕೆ ಮಾತುಕತೆ ನಡೆಸ್ತಿದೆ ಅಂತ ವರದಿಯಾಗಿದೆ. ಒಳ್ಳೇ ಬೆಲೆ ಸಿಕ್ಕಿದ್ರೆ ಜಿಯೋ ಫಿನಾನ್ಸ್‌ ಇಷ್ಟೊತ್ತಿಗೆ ಪರ್ಚೇಸ್‌ ಕೂಡ ಮಾಡಿರ್ತಿತ್ತು ಎನ್ನಲಾಗಿದೆ. ಆದ್ರೆ ಈಗ ಕಂಪ್ಲೀಟ್‌ ಬ್ಯುಸಿನೆಸ್ಸೇ ಬಂದಾಗಿರೋದ್ರಿಂದ ಪೇಟಿಎಂ ಮತ್ತೆ ಜಿಯೋ ಜೊತೆ ಮಾತುಕತೆ ನಡೆಸ್ತಿದೆ. ಜಿಯೋ ಪೇಟಿಎಂಗೆ ಬೇಲ್‌ಔಟ್‌ ಪ್ಲಾನ್‌ನಲ್ಲಿ ಇಡೀ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ್ನೇ ಖರೀದಿಸಬಹುದು ಎನ್ನಲಾಗಿದೆ. ಇನ್ನು ಪೇಟಿಎಂ, RBI ನಿರ್ಬಂಧ ಹೇರೋಕು ಮುಂಚೆ HDFC ಜೊತೆಗೆ ಕೂಡ ಚರ್ಚೆ ಮಾಡಿತ್ತು ಅಂತ ವರದಿಯಾಗಿದೆ. HDFC ಕಳೆದ ವರ್ಷವಷ್ಟೇ ತನ್ನ PayZyapp ಡಿಜಿಟಲ್‌ ವ್ಯಾಲೆಟ್‌ನ ಮತ್ತೆ ಇಂಟ್ರಡ್ಯೂಸ್‌ ಮಾಡಿತ್ತು. ಇದನ್ನ ಸುಮಾರು 1.4 ಕೋಟಿ ಜನ ಯೂಸ್‌ ಮಾಡ್ತಾರೆ. ಹೀಗಾಗಿ ಅದು ಕೂಡ ಪೇಟಿಎಂ ವ್ಯಾಲೆಟ್‌ಗೆ ಇಂಟರೆಸ್ಟ್‌ ತೋರ್ಸಿತ್ತು. ಅಂದ್ಹಾಗೆ 33 ಕೋಟಿ ಗ್ರಾಹಕರನ್ನ ಹೊಂದಿರೋ ಪೇಟಿಎಂ ವ್ಯಾಲೆಟ್‌ ಸೆಗ್ಮೆಂಟ್‌ನಲ್ಲಿ ಈಗಲೂ ಮಾರ್ಕೆಟ್‌ ಲೀಡರ್‌. RBI ಡೇಟಾ ಪ್ರಕಾರ ಡಿಸೆಂಬರ್‌ನಲ್ಲಿ ಪೇಟಿಎಂ ವ್ಯಾಲೆಟ್‌ ಮೂಲಕ ಗ್ರಾಹಕರು 2.4 ಕೋಟಿ ಟ್ರಾನ್ಸಾಕ್ಷನ್ಸ್‌ನಿಂದ ಸುಮಾರು 8 ಸಾವಿರ ಕೋಟಿ ಮೌಲ್ಯದ ಗೂಡ್ಸ್‌ ಸರ್ವೀಸಸ್‌ ಖರೀದಿ ಮಾಡಿದ್ದಾರೆ. ಇದಷ್ಟೇ ಅಲ್ದೇ 2 ಕೋಟಿ ಟ್ರಾನ್ಸಾಕ್ಷನ್‌ಗಳ ಮೂಲಕ ₹5,800 ಕೋಟಿ ದುಡ್ಡಿನ ವ್ಯವಹಾರ ನಡೆದಿದೆ. ಹೀಗಾಗಿ ಪೇಟಿಎಂ ವ್ಯಾಲೆಟ್‌ಗೆ ಈಗಲೂ ಒಳ್ಳೇ ಬೆಲೆ ಇದೆ. ಆದ್ರೆ ಲೈಸೆನ್ಸ್‌ನೇ ರದ್ದು ಮಾಡಿರೋದ್ರಿಂದ ಪೇಟಿಎಂ ಅನಿವಾರ್ಯವಾಗಿ ಮಾರಬೇಕಾಗಿ ಬಂದಿದೆ.

ಮತ್ತೊಂದ್‌ ಕಡೆ ಪೇಟಿಎಂ ಶೇರುಗಳ ಮಹಾಪತನ ಮುಂದುವರೆದಿದೆ. ಲೋವರ್‌ ಸರ್ಕೀಟ್‌ ಲಾಕ್‌ನ್ನ 10%ಗೆ ಇಳಿಸಿದ್ರಿಂದ ಇವತ್ತು ಪೇಟಿಎಂ ಶೇರುಗಳು 10% ಅಷ್ಟೇ ಕುಸಿದಿವೆ. ವಾರದ ಹಿಂದೆ ₹761 ಇದ್ದ ಶೇರಿನ ಬೆಲೆ ಇವತ್ತು ₹438.50 ಆಗಿದೆ. ಅಂದ್ಹಾಗೆ ಸ್ಟಾಕ್‌ ಮಾರ್ಕೆಟ್‌ ವಿಪರೀತ ಏರಿಳಿತ ಕಾಣೋದ್ರಿಂದ ಕೆಲವೊಮ್ಮೆ ಹೂಡಿಕೆದಾರರು ಭಾರೀ ನಷ್ಟ ಅನುಭವಿಸೋ ಸಾಧ್ಯತೆ ಇರುತ್ತೆ. ಹೀಗಾಗಿ ಇದನ್ನ ತಪ್ಪಿಸೋಕೆ ಸೆಬಿ ಈ ರೀತಿ ಸಿಚುವೇಷನ್‌ಗಳಲ್ಲಿ ಈ ಸರ್ಕೀಟ್‌ಗಳನ್ನ ಸೆಟ್‌ ಮಾಡುತ್ತೆ. ಅಂದ್ರೆ ಒಂದು ಸ್ಪೆಸಿಫಿಕ್‌ ಬೆಲೆಯ ನಂತ್ರ ಶೇರು ಏರಿಕೆ ಆಗೋ ಹಾಗಿಲ್ಲ ಅಥವಾ ಕುಸಿಯೋ ಹಾಗಿಲ್ಲ ಅಂತ ಲಾಕ್‌ ಮಾಡುತ್ತೆ. ಅದನ್ನೇ ನಾವು ಅಪ್ಪರ್‌ ಸರ್ಕೀಟ್‌ ಅಥವಾ ಲೋವರ್‌ ಸರ್ಕೀಟ್‌ ಅಂತ ಕರೀತಿವ. ಹಿಂದಿನ ದಿನದ ಶೇರಿನ ಬೆಲೆಗೆ ತಕ್ಕಂತೆ ಈ ಸರ್ಕೀಟ್‌ ನಿರ್ಧಾರ ಆಗಿರುತ್ತೆ. ಈಗ ಪೇಟಿಎಂಗೆ ಅಂತಹ ಲಾಕ್‌ ಸೆಟ್‌ ಮಾಡಿದಾರೆ. ಮುಂಚೆ 20% ಇತ್ತು ಇವತ್ತಿಂದ ಅದನ್ನ10%ಗೆ ಇಳಿಸಿದಾರೆ. ಈ ಹಿಂದೆ ಹಿಂಡನ್‌ಬರ್ಗ್‌ ವರದಿ ಬಂದಾಗ ಅದಾನಿ ಶೇರುಗಳಿಗೂ ಈ ರೀತಿ ಲೋವರ್‌ ಸರ್ಕೀಟ್‌ ಇಡಲಾಗಿತ್ತು. ಹೂಡಿಕೆದಾರರ ಹಿತ ಕಾಪಾಡೋಕೆ ಸೆಬಿ ಈ ಕ್ರಮ ಕೈಗೊಳ್ಳುತ್ತೆ.

-masthmagaa.com

Contact Us for Advertisement

Leave a Reply