ರಿಲಯಾನ್ಸ್‌ ಇಂಡಸ್ಟ್ರೀಸ್‌ ದಾಖಲೆ! ಮಾರ್ಕೆಟ್‌ ಮೌಲ್ಯ 20 ಲಕ್ಷ ಕೋಟಿ

masthmagaa.com:

ಮಾರುಕಟ್ಟೆ ಮೌಲ್ಯದಲ್ಲಿ ಭಾರತದ ಮದಗಜಗಳು ರೇಸ್‌ಗೆ ಬಿದ್ದವರಂತೆ ದಾಖಲೆ ಮಾಡ್ತಿವೆ. ಇತ್ತೀಚೆಗೆ ತಾನೇ ಟಾಟಾ, ರಿಲಯಾನ್ಸ್‌ ಹಿಂದಿಕ್ಕಿ 30 ಲಕ್ಷ ಕೋಟಿ ಮೌಲ್ಯವನ್ನ ತಲುಪಿತ್ತು. ಇದೀಗ ಅಂಬಾನಿಯ ರಿಲಾಯನ್ಸ್‌ ಇಂಡಸ್ಟ್ರೀಸ್‌ 20 ಲಕ್ಷ ಕೋಟಿ ರೂಪಾಯಿ ಕ್ರಾಸ್‌ ಮಾಡಿದೆ. ಈ ಮೂಲಕ ಇಷ್ಟೊಂದು ಭಾರೀ ಮೊತ್ತದ ಮಾರುಕಟ್ಟೆ ಬಂಡವಾಳ ಕ್ರಾಸ್‌ ಮಾಡಿದ ಮೊದಲ ಭಾರತೀಯ ಕಂಪನಿಯಾಗಿದೆ.
ಇದ್ರ ನಂತ್ರ ಟಾಟಾ ಗ್ರೂಪ್‌ನ TCS ಮಾರುಕಟ್ಟೆ ಮೌಲ್ಯ 15.07 ಲಕ್ಷ ಕೋಟಿ ರೂಪಾಯಿ ರೀಚ್‌ ಆಗಿ ಎರಡನೇ ಸ್ಥಾನದಲ್ಲಿದೆ. ಅದೇ HDFC ಬ್ಯಾಂಕ್‌ನ ಮಾರುಕಟ್ಟೆ ಬಂಡವಾಳ 10.56 ಲಕ್ಷ ಕೋಟಿ ರೂಪಾಯಿ ಆಗಿದೆ. ಅಂದ್ಹಾಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮೊಟ್ಟಮೊದಲ ಬಾರಿಗೆ 10 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಗಡಿಯನ್ನ 2019ರ ನವೆಂಬರ್‌ 28ರಂದು ರೀಚ್‌ ಆಗಿತ್ತು.

-masthmagaa.com

Contact Us for Advertisement

Leave a Reply