ಭಾರತದಲ್ಲಿ ವೈರ್‌ಲೆಸ್‌ ಇಂಟರ್ನೆಟ್‌ ಸೇವೆ ನೀಡಲು ಶ್ರೀಮಂತರ ಪೈಪೋಟಿ!

masthmagaa.com:

ಭಾರತದಲ್ಲಿ ಉಪಗ್ರಹಗಳ ಮೂಲಕ ವೈರ್‌ಲೆಸ್‌ ಇಂಟರ್ನೆಟ್‌ ಒದಗಿಸೋ ವಿಚಾರಕ್ಕೆ ಸಂಬಂಧಿಸಿದಂತೆ ಜಾಗತಿಕ ಶ್ರೀಮಂತರ ನಡುವೆ ಪೈಪೋಟಿ ಜೋರಾಗಿದೆ. ವಿಶ್ವದ ನಂಬರ್‌ ಒನ್‌ ಶ್ರೀಮಂತ ಹಾಗೂ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ತಮ್ಮ ಬಹುನಿರೀಕ್ಷಿತ ಉಪಗ್ರಹ ಆಧಾರಿತ ಸ್ಟಾರ್‌ಲಿಂಕ್‌ ವೈರಲೆಸ್‌ ಇಂಟರ್ನೆಟ್‌ ಅನ್ನ ಭಾರತಕ್ಕೆ ಪರಿಚಯಿಸಬೇಕು ಅಂತ ಪ್ರಯತ್ನಿಸುತ್ತಿದ್ದಾರೆ. ಆದ್ರೆ ಇದಕ್ಕೆ ಬೇಕಾದ ಲೈಸೆನ್ಸ್‌ ವಿಚಾರದಲ್ಲಿ ಬಿಕ್ಕಟ್ಟು ಉಂಟಾಗಿದೆ. ಇನ್ನು ಕಳೆದ ವಾರ ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದ ಮಸ್ಕ್, ಭಾರತದಲ್ಲಿ ಸ್ಟಾರ್‌ಲಿಂಕ್ ಅನ್ನು ಪ್ರಾರಂಭಿಸಲು ಉತ್ಸುಕರಾಗಿರೋದಾಗಿ ಹೇಳಿದ್ದರು. ಆದ್ರೆ ಈ ಸೇವೆ ನೀಡೋಕೆ ಸ್ಟಾರ್‌ಲಿಂಕ್‌ ಕೇವಲ ಲೈಸೆನ್ಸ್‌ಗಾಗಿ ಮಾತ್ರ ಬೇಡಿಕೆ ಇಟ್ಟಿದ್ದು, ಸಿಗ್ನಲ್‌ ಕ್ಯಾರಿಂಗ್‌ ಸ್ಪೆಕ್ಟ್ರಮ್‌ ಅಥ್ವಾ ಏರ್‌ವೇವ್ಸ್‌ಗಳನ್ನ ಹರಾಜನಲ್ಲಿ ತೆಗೆದುಕೊ‍ಳ್ಳೋಕೆ ಮಸ್ಕ್‌ ಕಂಪನಿ ರೆಡಿಯಿಲ್ಲ. ಇದೇ ರೀತಿ ಟಾಟಾ ಗ್ರೂಪ್‌, ಏರ್ಟ್‌ಲ್‌ನ ಸುನಿಲ್‌ ಭಾರ್ತಿ ಮಿತ್ತಲ್‌ ಹಾಗೂ ಅಮೆಜಾನ್‌ ಕಂಪನಿಗಳು ಕೂಡ ಮಸ್ಕ್‌ರಂತೇ ಕೇವಲ ಲೈಸನ್ಸ್‌ಗಾಗಿ ಬೇಡಿಕೆಯಿಟ್ಟಿವೆ. ಆದ್ರೆ ಇದೀಗ ಬಿಕ್ಕಟ್ಟು ಉಂಟಾಗಿರೋದು ಮುಕೇಶ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಕಂಪನಿ ಜೊತೆಯಲ್ಲಿ. ವಾಯ್ಸ್‌ ಮತ್ತು ಡೇಟಾ ಸೇವೆಗಳನ್ನ ನೀಡಲು ವಿದೇಶಿ ಸ್ಯಾಟಲೈಟ್‌ ಸೇವೆಗಳ ಪೂರೈಕೆದಾರರಿಗೆ ಸ್ಪೆಕ್ಟ್ರಮ್‌ ಹರಾಜು ಮಾಡಲೇಬೇಕು ಅಂತ ರಿಲಾಯನ್ಸ್‌ ಹೇಳ್ತಿದೆ. ಈಗಾಗಲೇ ಹಾರಾಜಿನ ಮೂಲಕ ತರಂಗಾಂತರಗಳನ್ನ ಪಡೆಯಲಾಗಿದೆ. ಇದೀಗ ಫಾರಿನ್‌ ಕಂಪನಿಗಳಿಗೆ ಕೇವಲ ಲೈಸೆನ್ಸ್‌ ಕೊಡೋದ್ರಿಂದ ನಮಗೆ ನಷ್ಟವಾಗಲಿದೆ. ಹೀಗಾಗಿ ಎಲ್ಲರಿಗೂ ಒಂದೇ ರೂಲ್ಸ್‌ ಅನ್ವಯ ಆಗ್ಬೇಕು ಹಾಗೂ ಸ್ಪೆಕ್ಟ್ರಮ್‌ಗಳನ್ನ ಹಾರಾಜು ಮಾಡ್ಬೇಕು ಅಂತ ರಿಲಯಾನ್ಸ್‌ ಹೇಳಿದೆ.

-masthmagaa.com

Contact Us for Advertisement

Leave a Reply