ಏಕರೂಪ ಕಾನೂನು ಬಗ್ಗೆ ಚರ್ಚೆ ಮಾಡೋಕೆ ಮುಸ್ಲಿಂ ಬಾಡಿ ರೆಡಿ! ದೆಹಲಿಯಲ್ಲಿ ಬೃಹತ್‌ ಸಮಾವೇಶ!

masthmagaa.com:

ದೇಶದಲ್ಲಿ ಯಾವಾಗಲೂ ಚರ್ಚೆಯಲ್ಲಿರೋ ಏಕರೂಪ ನಾಗರೀಕ ಸಂಹಿತೆ ಬಗ್ಗೆ ಚರ್ಚಿಸೋಕೆ ಮುಸ್ಲಿಂ ಧರ್ಮಗುರುಗಳು ಹಾಗೂ ಇಸ್ಲಾಂ ಸಂಘಟನೆ ಉಲಮಾ-ಇ-ಹಿಂದ್ ಸಮಾವೇಶ ಹಮ್ಮಿಕೊಂಡಿದೆ. ಇದೇ ಫೆಬ್ರವರಿ 12 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಈ ಬೃಹತ್ ಸಮಾವೇಶ ನಡೆಯಲಿದೆ. ಸುಮಾರು 10 ಸಾವಿರ ಧರ್ಮಗುರುಗಳು, ಎನ್‌ಜಿಒಗಳು ಇದ್ರಲ್ಲಿ ಭಾಗಿಯಾಗಲಿದ್ದಾರೆ. ಸಿವಿಲ್‌ ಕೋಡ್‌ ಜೊತೆಗೆ ಮದರಸಾಗಳಿಗೆ ಸ್ವಾಯತ್ತತೆ, ಮುಸ್ಲಿಮರಿಗೆ ಮೀಸಲಾತಿ ಬಗ್ಗೆ ಕೂಡ ಚರ್ಚೆ ನಡೆಸಲಾಗುತ್ತೆ.

-masthmagaa.com

Contact Us for Advertisement

Leave a Reply