ಷರಿಯತ್‌ ಕೌನ್ಸಿಲ್‌ಗಳು ನೀಡೋ ವಿಚ್ಛೇದನ ಪತ್ರ ಕಾನೂನು ಬಾಹಿರ: ಮದ್ರಾಸ್‌ ಹೈಕೋರ್ಟ್‌

masthmagaa.com:

ವಿಚ್ಛೇದನ ಬಯಸೋ ಮುಸ್ಲಿಂ ಮಹಿಳೆಯರು ಕೇವಲ ಕೌಟುಂಬಿಕ ನ್ಯಾಯಾಲಯಗಳನ್ನ ಸಂಪರ್ಕಿಸಬೇಕು, ಷರಿಯತ್ ಕೌನ್ಸಿಲ್‌ಗಳಂತ ಖಾಸಗಿ ಸಂಸ್ಥೆಗಳನ್ನ ಸಂಪರ್ಕಿಸಬಾರದು ಅಂತ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಷರಿಯತ್‌ ಕೌನ್ಸಿಲ್‌ಗಳು ನೀಡೋ ʻಖುಲಾʼ ಪತ್ರ ಅಂದ್ರೆ ಮುಸ್ಲಿಂ ಮಹಿಳೆಯರು ತಮ್ಮ ಪತಿಗೆ ನೀಡುವ ವಿಚ್ಛೇದನ, ಕಾನೂನು ಬಾಹಿರ ಅಂತ ಕೋರ್ಟ್‌ ಹೇಳಿದೆ. ಅಂದಹಾಗೆ 2017ರಲ್ಲಿ ಷರಿಯತ್ ಕೌನ್ಸಿಲ್‌ನಿಂದ ತನ್ನ ಪತ್ನಿ ಪಡೆದಿದ್ದ ಖುಲಾ ಪ್ರಮಾಣಪತ್ರವನ್ನು ರದ್ದುಗೊಳಿಸಿ ಅಂತ ಕೋರಿ ವ್ಯಕ್ತಿಯೊಬ್ರು ಸಲ್ಲಿಸಿದ್ದ ಮನವಿಯನ್ನ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ನಿರ್ದೇಶನ ನೀಡಿದ್ದಾರೆ.

-masthmagaa.com

Contact Us for Advertisement

Leave a Reply