ರಾಜಧಾನಿ ದೆಹಲಿಯಲ್ಲಿ ಶಿಮ್ಲಾಗಿಂತಲೂ ಹೆಚ್ಚಾದ ಚಳಿ!

masthmagaa.com:

ದೆಹಲಿಯಲ್ಲಿ ಮುಂಜಾನೆ 4.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿ ರಾಜಧಾನಿಯ ಜನರನ್ನ ಗಡಗಡ ನಡುಗಿಸಿದೆ. ಈವರೆಗೆ ದೆಹಲಿಯಲ್ಲಿ 8 ಡಿಗ್ರಿ ಮೇಲಿದ್ದ ತಾಪಮಾನ ಇಂದು ದಿಢೀರ್‌ನೇ ಕುಸಿದಿದೆ. ಶಿಮ್ಲಾ, ಧರ್ಮಶಾಲ ಹಾಗೂ ಮಸೂರಿಗಿಂತಲೂ ಕಡಿಮೆ ತಾಪಮಾನ ದೆಹಲಿಯಲ್ಲಿ ರೆಕಾರ್ಡ್‌ ಆಗಿದೆ. ಹರ್ಯಾಣದ ಹಿಸ್ಸಾರ್‌ ಜಿಲ್ಲೆಯಲ್ಲಿ 4.2 ಡಿಗ್ರಿ ತಾಪಮಾನ ದಾಖಲಾಗಿದೆ. ಉತ್ತರ ಹಾಗೂ ವಾಯುವ್ಯದಿಂದ ಬೀಸ್ತಿರೋ ಶೀತ ಗಾಳಿಯ ಪರಿಣಾಮವಾಗಿ ಈ ಪ್ರದೇಶದಲ್ಲಿ ಟೆಂಪರೇಚರ್‌ ಡ್ರಾಪ್‌ ಆಗಿದೆ

-masthmagaa.com

Contact Us for Advertisement

Leave a Reply