ಮೋಚಾ ಚಂಡಮಾರುತ: ಸಾವಿನ ಸಂಖ್ಯೆ 145ಕ್ಕೆ ಏರಿಕೆ

masthmagaa.com:

ಮಯನ್ಮಾರ್‌ನಲ್ಲಿ ಮೋಚಾ ಚಂಡಮಾರುತ ತನ್ನ ಅಬ್ಬರವನ್ನ ಮುಂದುವರೆಸಿದ್ದು, ಸಾವಿನ ಸಂಖ್ಯೆ 145ಕ್ಕೆ ಏರಿಕೆಯಾಗಿದೆ. ಅತಿ ವೇಗವಾಗಿ ಬೀಸುತ್ತಿರೊ ಗಾಳಿಯಿಂದ ಮನೆಗಳು, ಆಸ್ಪತ್ರೆಗಳು ಹಾಗೂ ಶಾಲೆಗಳು ನಾಶವಾಗಿ, ರಸ್ತೆಗಳು ಬುಡಸಮೇತವಾಗಿ ಉರುಳಿದ ಮರಗಳಿಂದ ತುಂಬಿಹೋಗಿವೆ ಅಂತ ಸ್ಥಳೀಯ ಸೇನಾಧಿಕಾರಿಗಳು ಹೇಳಿದ್ದಾರೆ. ಇತ್ತ ಮಯನ್ಮಾರ್‌ ಪರಿಸ್ಥಿತಿಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಕನಿಷ್ಠ 8 ಲಕ್ಷ ಜನರಿಗೆ ತುರ್ತು ಆಹಾರ ಹಾಗೂ ಇತರ ಮಾನವೀಯ ನೆರವಿನ ಅನಿವಾರ್ಯತೆ ಇದೆ ಅಂತ ಯುಎನ್‌ನ ವರ್ಲ್ಡ್‌ ಫುಡ್‌ ಪ್ರೋಗ್ರಾಮ್‌ನ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply