ಬೋಯಿಂಗ್‌ ವಿಮಾನ ಹೊತ್ತು ಬಾಹ್ಯಾಕಾಶಕ್ಕೆ ಹಾರಲಿದೆ ಮಸ್ಕ್‌ ಹೆವಿ!

masthmagaa.com:

ಟೆಸ್ಲಾ ಸಿಎಒ ಎಲಾನ್‌ ಮಸ್ಕ್‌ ಒಡೆತನದ ಬಾಹ್ಯಾಕಾಶ ಕಂಪನಿ ಸ್ಪೇಸ್‌-X ಹೊಸದೊಂದು ಮಿಶನ್‌ಗೆ ಕೈ ಹಾಕಿದೆ. ಮಾಡಿಫೈ ಮಾಡಿರೋ ಬೋಯಿಂಗ್‌ ವಿಮಾನದಿಂದ ತಯಾರಾಗಿರೋ X-37B ಸ್ಪೇಸ್‌ ಪ್ಲೇನನ್ನ ಹೊತ್ತು, ಸ್ಪೇಸ್‌-Xನ ಫಾಲ್ಕನ್‌ ಹೆವಿ ರಾಕೆಟ್‌ ಬಾಹ್ಯಾಕಾಶಕ್ಕೆ ಹಾರಲಿದೆ. ಈ ಮೊದಲು ಇಂತಹ ಆರು ಮಿಷನ್‌ಗಳಲ್ಲಿ ಸ್ಪೇಸ್‌ ಪ್ಲೇನ್‌ಗಳನ್ನು ಇಂಡಿಪೆಂಡೆಂಟಾಗಿ ನಾಸಾ ಉಡಾವಣೆ ಮಾಡಿತ್ತು. ಈ ಬಾರಿ ಏಳನೇ ಮಿಷನ್‌ನಲ್ಲಿ Orbital Test Vehicle (OTV-7)ನ್ನ ಸ್ಪೇಸ್‌-X ರಾಕೆಟ್‌ನೊಂದಿಗೆ ಉಡಾವಣೆ ಮಾಡಲು ನಾಸಾ ಸಜ್ಜಾಗಿದೆ. ಈ ಹಿಂದೆ ಉಡಾವಣೆಯಾಗಿದ್ದ OTV-6 ಸ್ಪೇಸ್‌ ಪ್ಲೇನ್‌ ಬರೋಬ್ಬರಿ 908 ದಿನಗಳ ಕಾಲ ಭೂಮಿಯ ಆರ್ಬಿಟ್‌ನಲ್ಲಿತ್ತು. ಇದೀಗ ಡಿಸೆಂಬರ್‌ 11ಕ್ಕೆ OTV-7 ಲಾಂಚ್‌ ಆಗಲಿದೆ.

-masthmagaa.com

Contact Us for Advertisement

Leave a Reply