ಜಪಾನ್‌ನ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ!

masthmagaa.com:

ಜಪಾನ್‌ನ ಹಿರೋಷಿಮಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ ಅವ್ರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜಪಾನ್‌ ಪ್ರಧಾನಿ ಕಿಶಿದಾ ಅವ್ರೊಂದಿಗೆ ಸಬೆ ನಡೆಸಲಾಯಿತು. ಉಭಯ ದೇಶಗಳ ಸಂಬಂಧಗಳನ್ನ ಪರಿಶೀಲಿಸಲಾಯಿತು. ಜೊತೆಗೆ ಭಾರತದ ಜಿ20 ಅಧ್ಯಕ್ಷತೆ ಹಾಗೂ ಜಪಾನ್‌ನ ಜಿ7 ಅಧ್ಯಕ್ಷತೆಯ ಸಾಮಾನ್ಯ ವಿಷಯಗಳ ಕುರಿತು ಚರ್ಚಿಸಲಾಗಿದೆ ಅಂತ ಮೋದಿ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿಯನ್ನ ಅನಾವರಣಗೊಳಿಸಲಾಗಿದೆ. ಈ ಪ್ರತಿಮೆ ಜಗತ್ತಿಗೆ ಬಹಳ ಮುಖ್ಯವಾದ ಸಂದೇಶವನ್ನ ನೀಡುತ್ತದೆ. ಗಾಂಧಿಯವರ ಶಾಂತಿ ಮತ್ತು ಸೌಹಾರ್ದತೆಯ ಆದರ್ಶಗಳು ಜಾಗತಿಕವಾಗಿ ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತದೆ ಅಂತ ಮೋದಿ ಹೇಳಿದ್ದಾರೆ. ಅಂದ್ಹಾಗೆ ಜಿ7 ರಾಷ್ಟ್ರಗಳ ಗುಂಪಿನಲ್ಲಿ ಭಾರತ ಇಲ್ಲ ಆದ್ರೆ ಸಭೆಯಲ್ಲಿ ವಿಶೇಷ ಆಹ್ವಾನಿತ ದೇಶವಾಗಿ ಭಾಗವಹಿಸುತ್ತಿದೆ. ಇನ್ನು ಸಭೆ ವೇಳೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಮೋದಿಯವ್ರ ಬಳಿ ಬಂದು ಹಗ್‌ ಮಾಡಿ ಮಾತಾಡಿದ್ದಾರೆ.

-masthmagaa.com

Contact Us for Advertisement

Leave a Reply