ದೇವಿ ಪೂಜೆಯಂತೆ ಖುಷ್ಬುಗೆ ನಾರಿ ಪೂಜೆ !

masthmagaa.com:

80ರ ದಶಕದ ಟಾಪ್‌ ನಟಿಯರಲ್ಲಿ ಖುಷ್ಬು ಕೂಡ ಒಬ್ಬರು. ಕನ್ನಡ, ತೆಲುಗು, ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಖುಷ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. ರವಿಚಂದ್ರನ್, ಅನಂತ್ ನಾಗ್, ವಿಷ್ಣುವರ್ಧನ್, ರಜನಿಕಾಂತ್‌, ಕಮಲ್ ಹಾಸನ್‌, ಅವರಂತಹ ಟಾಪ್ ನಟರ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದಾರೆ.

ಇದೀಗ ಕೇರಳದ ತ್ರಿಶೂರ್​ನ ವಿಷ್ಣುಮಯ ದೇಗುಲದಲ್ಲಿ ನಟಿ ಖುಷ್ಬೂಗೆ ನಾರಿ ಪೂಜೆ ಮಾಡಿದ್ದಾರೆ. ನಟಿಯ ಕಾಲು ತೊಳೆದು, ಹೂವಿನ ಮಾಲೆ ಹಾಕಿ ದೇವಿ ಪೂಜೆಯಂತೆ ನಾರಿ ಪೂಜೆ ಮಾಡಿದ್ದಾರೆ. ಈ ಫೋಟೋಗಳನ್ನು ಖುಷ್ಬು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ದೇವರಿಂದ ದೈವಿಕ ಆಶೀರ್ವಾದ. ನಾರಿ ಪೂಜೆಗೆ ನನ್ನನ್ನು ಆಹ್ವಾನಿಸಿದ್ದು ನನ್ನ ಅದೃಷ್ಟ ಅಂತ ಭಾವಿಸ್ತೀನಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply