ಭಾರತ ಗ್ರೇಟ್‌ ಫ್ಯುಚರ್‌ ಪಾರ್ಟ್‌ನರ್‌: NASA

masthmagaa.com:

ಭಾರತ ಮತ್ತು ಅಮೆರಿಕ ನಡುವೆ ಬಾಹ್ಯಾಕಾಶ ಸಹಕಾರ ಹೆಚ್ಚಿಸೋ ಬಗ್ಗೆ ಉಭಯ ದೇಶಗಳು ಮಾತುಕತೆ ನಡೆಸಿವೆ. ಭಾರತ ಪ್ರವಾಸದಲ್ಲಿರೋ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಮುಖ್ಯಸ್ಥ ಬಿಲ್‌ ನೆಲ್ಸನ್‌, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಅವ್ರನ್ನ ಭೇಟಿ ಮಾಡಿ ಮೀಟಿಂಗ್‌ ನಡೆಸಿದ್ದಾರೆ. ಈ ವೇಳೆ ಭಾರತೀಯ ಗಗನಯಾತ್ರಿಗಳಿಗೆ ನಾಸಾದಿಂದ ಟ್ರೈನಿಂಗ್‌ ಕೊಟ್ಟು ಮುಂದಿನ ವರ್ಷ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸೋ ಕುರಿತು ಚರ್ಚಿಸಲಾಗಿದೆ. ಈ ಮೂಲಕ ಉಭಯ ದೇಶಗಳ ನಡುವೆ ಸ್ಪೇಸ್‌ ಸಹಕಾರ ಹೆಚ್ಚಿಸೋ ಬಗ್ಗೆ ಫೋಕಸ್‌ ಮಾಡಲಾಗಿದೆ. ಈ ವೇಳೆ ಮಾತನಾಡಿದ ನೆಲ್ಸನ್‌, ʻಸ್ಪೇಸ್‌ನಲ್ಲಿರೋ ಗಗನಯಾತ್ರಿಗಳಿಗೆ ಭಾರತ, ಒಂದೊಳ್ಳೆ ಫ್ಯುಚರ್‌ ಪಾರ್ಟ್‌ನರ್‌ ಆಗಲಿದೆ. 2024ರ ವೇಳೆಗೆ ಎರಡು ದೇಶಗಳು ಸೇರಿ ಲೋ ಅರ್ಥ್‌ ಆರ್ಬಿಟ್‌ (low earth orbit) ವೀಕ್ಷಣಾಲಯವನ್ನ ಭಾರತದಲ್ಲಿ ಲಾಂಚ್‌ ಮಾಡ್ತೀವಿʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply