ನಾಸಾದ ಹೊಸ ಆರ್ಟಿಮಿಸ್‌ ಮಿಷನ್‌ ಮುಂದೂಡಿಕೆ! ಯಾಕೆ?

masthmagaa.com:

ಚಂದ್ರನ ಮೇಲೆ ಮನುಷ್ಯರನ್ನ ಕಳಿಸೋ ನಾಸಾದ ಪ್ಲಾನ್‌ ಸದ್ಯ ಮತ್ತೊಂದು ವರ್ಷ ಪೋಸ್ಟ್‌ಪೋನ್‌ ಆಗಿದೆ. ಅಂದ್ಹಾಗೆ ಈ ವರ್ಷದ ಕೊನೆಯಲ್ಲಿ ಆರ್ಟಿಮಿಸ್‌-2ನಲ್ಲಿ ನಾಸಾದ ಗಗನಯಾತ್ರಿಗಳು ಚಂದ್ರನ ಸುತ್ತ ಸುತ್ತಿ ಬರ್ಬೇಕಿತ್ತು. ನಂತ್ರ ಆರ್ಟಿಮಿಸ್‌-3ಯಲ್ಲಿ 2025ಕ್ಕೆ ಗಗನಯಾತ್ರಿಗಳು ಚಂದ್ರನ ಮೇಲೆ ಹೋಗ್ಬೇಕಿತ್ತು. ಆದ್ರೆ ಕೆಲ ತಾಂತ್ರಿಕ ಕಾರಣಗಳಿಂದ ಆರ್ಟಿಮಿಸ್‌-2 ಪ್ರಾಜೆಕ್ಟ್‌ನ 2025ರ ಸೆಪ್ಟೆಂಬರ್‌ಗೆ ಮುಂದೂಡಲಾಗಿದೆ ಅಂತ ನಾಸಾ ಹೇಳಿದೆ. ಹೀಗಾಗಿ ಮೂನ್‌ಲ್ಯಾಂಡಿಂಗ್‌ ಮಾಡ್ಬೇಕಿದ್ದ ಆರ್ಟಿಮಿಸ್‌-3 ಕೂಡ ಪೋಸ್ಟ್‌ಪೋನ್‌ ಆದಂತೆ ಆಗಿದೆ. ಅಂದ್ಹಾಗೆ ಮೊನ್ನೆ ಜನವರಿ 8ರಂದು Astroboticನ ಮೂನ್‌ ಲ್ಯಾಂಡಿಂಗ್‌ ಫೇಲ್‌ ಆಗ್ತಿದ್ದಂತೆ ಈ ಸುದ್ದಿ ಬಂದಿದೆ. ಖಾಸಗಿ ಸ್ಪೇಸ್‌ ಏಜೆನ್ಸಿ Astrobotic ಈ ಮಿಷನ್‌ನಲ್ಲಿ ಚಂದ್ರನ ಮೇಲೆ ಲ್ಯಾಂಡರ್‌ನ ಕಳಿಸ್ತಿತ್ತು. ಆದ್ರೆ ಇಂಧನ ಸೋರಿಕೆಯಾಗಿದ್ರಿಂದ ನೌಕೆ ಸ್ಪೇಸ್‌ ಏಜೆನ್ಸಿಯ ಕೈ ತಪ್ಪಿತ್ತು. ಈ ಯೋಜನೆ ಗಗನಯಾತ್ರಿಗಳಿಗೆ ತುಂಬಾ ನೆರವಾಗ್ತಿತ್ತು ಎನ್ನಲಾಗಿದೆ. ಈಗ ಮುಂದಿನ ತಿಂಗಳು Astrobotic ಮತ್ತೆ ಪ್ರಯತ್ನ ಮಾಡಲಿದೆ. ಅಂದ್ಹಾಗೆ ನಾಸಾ ಮಾನವರನ್ನ ಚಂದ್ರನ ಮೇಲೆ ಕಳಿಸೋ ಆರ್ಟಿಮಿಸ್‌ ಯೋಜನೆಗೆ, ಖಾಸಗಿ ಬಾಹ್ಯಾಕಾಶ ಸಂಸ್ಥೆಗಳ ಮೇಲೆ ತುಂಬಾ ನೆಚ್ಕೊಂಡಿದೆ. ಹೀಗಾಗಿ ಆರ್ಟಿಮಿಸ್‌ ಸಕ್ಸಸ್‌ ಆಗೋಕೆ ಈ ಮಿನಿ ಯೋಜನೆಗಳು ಸಕ್ಸಸ್‌ ಆಗೋದು ತುಂಬಾ ಇಂಪಾರ್ಟೆಂಟ್‌.

-masthmagaa.com

Contact Us for Advertisement

Leave a Reply