ಮತ್ತೊಮ್ಮೆ ಚಂದ್ರನ ಮೇಲೆ ಲ್ಯಾಂಡ್‌ ಆಗೋಕೆ ಹೊರಟ ನಾಸಾ!

masthmagaa.com:

ಭಾರತ ಚಂದ್ರಯಾನ್‌ 3 ಮೂಲಕ ಚಂದ್ರನ ಅಂಗಳಕ್ಕೆ ಕಾಲಿಟ್ಟ ಕೆಲವು ತಿಂಗಳಲ್ಲೇ, ಇದೀಗ ನಾಸಾ ಕೂಡ ಮತ್ತೆ ಚಂದ್ರನ ಕಡೆಗೆ ಮುಖ ಮಾಡಿದೆ. ಅಮೆರಿಕದ ಆಸ್ಟ್ರೋಬಾಟಿಕ್‌ ಟೆಕ್ನಾಲಜಿ ನಿರ್ಮಿಸಿರೋ ಪೆರಿಗ್ರೀನ್‌ ಮಿಶನ್‌ 1 ಲೂನಾರ್‌ ಲ್ಯಾಂಡರನ್ನ ನಾಸಾ ಲಾಂಚ್‌ ಮಾಡಿದೆ. ತನ್ನ ಕಮರ್ಷಿಯಲ್‌ ಲೂನಾರ್‌ ಪೇಲೋಡ್‌ ಸರ್ವೀಸ್‌ ಯೋಜನೆಯಡಿ 20 ಪೇಲೋಡ್‌ಗಳನ್ನ ಹೊತ್ತು ನಾಸಾದ ವುಲ್ಕನ್‌ ರಾಕೆಟ್‌ ಗಗನಕ್ಕೆ ಹಾರಿದೆ. ಚಂದ್ರನ ಮೇಲಿರೋ ಬೇ ಆಫ್‌ ಸ್ಟಿಕಿನೆಸ್‌ನ್ನ ಎಕ್ಸ್‌ಪ್ಲೋರ್‌ ಮಾಡೋಕೆ ಈ ಲ್ಯಾಂಡರ್‌ ಲಾಂಚ್‌ ಮಾಡಲಾಗಿದೆ. ಈ ಪೇಲೋಡ್‌ಗಳಲ್ಲಿ ಹಲವು ವೈಜ್ಞಾನಿಕ ಉಪಕರಣಗಳಿದ್ದು, ಸುಮಾರು 192 ಗಂಟೆ ಅಂದ್ರೆ ಸುಮಾರು 8 ದಿನ ಕಾರ್ಯಾಚರಣೆ ಮಾಡುತ್ತೆ ಅಂತ ತಿಳಿದು ಬಂದಿದೆ. ಇನ್ನು ವಿಶೇಷ ಏನಪ್ಪ ಅಂದ್ರೆ, ಪೇಲೋಡ್‌ಗಳ ಜೊತೆಗೆ ಈ ನೌಕೆ ವಿಕಿಪಿಡಿಯಾದ ಒಂದು ಕಾಪಿ, ಒಂದು ಬಿಟ್‌ ಕಾಯಿನ್‌ ಲೋಗೋ, ಕೆಲವು ಫೋಟೋಗ್ರಾಫ್‌ಗಳು ಹಾಗೇ, ಮೌಂಟ್‌ ಎವರೆಸ್ಟ್‌ನ ಕಲ್ಲಿನ ಚೂರೊಂದನ್ನ ಹಾಕಿ ಕಳಿಸಿದ್ದಾರೆ. ಫೆಬ್ರವರಿ 23ಕ್ಕೆ ಈ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆಗುತ್ತೆ ಅಂತ ಅಂದಾಜಿಸಲಾಗಿದೆ.

-masthmagaa.com

Contact Us for Advertisement

Leave a Reply