ಭೂಮಿಗೆ ವಾಪಸ್‌ ಬರ್ತಿದೆ ನಾಸಾದ ಪೆರಿಗ್ರೀನ್‌ ಲ್ಯಾಂಡರ್!

masthmagaa.com:

ಅಮೆರಿಕ ನಾಸಾ ಜೊತೆ ಆಸ್ಟ್ರೊಬಾಟಿಕ್‌ ಅನ್ನೋ ಕಂಪನಿ ಜನವರಿ 8ರಂದು ಚಂದ್ರಲೋಕಕ್ಕೆ ಲ್ಯಾಂಡರ್‌ ಒಂದನ್ನ ಲಾಂಚ್‌ ಮಾಡಿತ್ತು. ಇದೀಗ ಈ ಪೆರಿಗ್ರೀನ್‌ ಲ್ಯಾಂಡರ್‌ ವಾಪಸ್‌ ಭೂಮಿ ಕಡೆ ಬರ್ತಿದೆ. ಈ ಲ್ಯಾಂಡರನ್ನ ವುಲ್ಕನ್‌ ರಾಕೆಟ್‌ನಿಂದ ಲಾಂಚ್‌ ಮಾಡಲಾಗಿತ್ತು. ಆದ್ರೆ ಸ್ಪೇಸ್‌ಕ್ರಾಫ್ಟ್‌ನಲ್ಲಿ ಇಂಧನ ಸೋರಿಗೆ ಶುರುವಾಗಿ ಮಿಷನ್‌ ಫೇಲಾಗಿತ್ತು. ಈಗ ಈ ಲ್ಯಾಂಡರ್‌ ವಾಪಸ್‌ ಭೂಮಿ ಕಡೆ ಬರ್ತಿದೆ ಅನ್ನೋ ವಿಚಾರ ವರದಿಯಾಗಿದೆ. ʻಸ್ಪೇಸ್‌ಕ್ರಾಫ್ಟ್‌ನಲ್ಲಿ ಚಂದ್ರನನ್ನ ರೀಚ್‌ ಆಗೋವಷ್ಟು ಇಂಧನ ಉಳಿದಿಲ್ಲ. ಹಾಗಾಗಿ ಇದು ವಾಪಸ್‌ ಬರ್ತಿದೆ. ಅದ್ರೆ ಇದನ್ನ ನಾವು ರಿಕವರ್‌ ಮಾಡ್ಕೊಳ್ಳೋಕೆ ಆಗಲ್ಲ. ಇದು ವಾತಾವರಣಕ್ಕೆ ಎಂಟ್ರಿ ಕೊಡ್ತಿದ್ದಂಗೆ ಸುಟ್ಟು ಬೂದಿಯಾಗತ್ತೆ ಅಂತ ಆಸ್ಟ್ರೊಬಾಟಿಕ್‌ ಸಂಸ್ಥೆ ಹೇಳಿದೆ.

-masthmagaa.com

Contact Us for Advertisement

Leave a Reply