ಅಮೆರಿಕದಲ್ಲಿ ಮತ್ತೆ ಬಂತು ಸೂಪರ್‌ಸಾನಿಕ್‌ ಕಮರ್ಷಿಯಲ್‌ ವಿಮಾನ!

masthmagaa.com:

ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ, ಕಮರ್ಷಿಯಲ್‌ ಸೂಪರ್‌ಸಾನಿಕ್‌ ವಿಮಾನವೊಂದರ ಮೋಡೆಲ್‌ನ್ನ ಅನ್ವೀಲ್‌ ಮಾಡಿದೆ. ವಿಮಾನ ತಯಾರಿಕ ಸಂಸ್ಥೆ ಲಾಕ್‌ಹೀಡ್‌ ಮಾರ್ಟಿನ್‌ ಸಹಯೋಗದಲ್ಲಿ ನಾಸಾ ಈ ವಿಮಾನ ತಯಾರಿಸಿದೆ. X-59 ಅನ್ನೋ ಹೆಸರಿನ ಈ ಪ್ರಾಯೋಗಿಕ ವಿಮಾನಕ್ಕೆ, ಶಬ್ಧದ ವೇಗಕ್ಕಿಂತ ಒಂದೂವರೆ ಪಟ್ಟು, ಅಂದ್ರೆ ಗಂಟೆಗೆ ಸುಮಾರು 1500 ಕಿಲೋಮೀಟರ್‌ ವೇಗದಲ್ಲಿ ಹಾರೋ ಸಾಮರ್ಥ್ಯ ಇದೆ. ಈ ವಿಮಾನ ಸುಮಾರು 30 ಮೀಟರ್‌ ಉದ್ದ, 9 ಮೀಟರ್‌ ಅಗಲ ಇದೆ. ಫೈಟರ್‌ ಜೆಟ್‌ ತರ ಚೂಪಾದ ಮೂತಿ ಇದೆ ಈ ವಿಮಾನಕ್ಕೆ. ಸಧ್ಯಕ್ಕೆ ಈ ವಿಮಾನವನ್ನ ಅಮೆರಿಕದಲ್ಲಿ ಡೊಮೆಸ್ಟಿಕ್‌ ಆಗಿ ಬಳಸೋ ಇಂಟೆನ್ಶನ್‌ ಇದೆ ಅಂತ ತಿಳಿದು ಬಂದಿದೆ. ಇನ್ನು ಇದಕ್ಕೂ ಮುಂಚೇನೂ ಅಮೆರಿಕದಲ್ಲಿ ಸೂಪರ್‌ ಸಾನಿಕ್‌ ವಿಮಾನಗಳಿದ್ವು. ಆದ್ರೆ ಅವಕ್ಕೆ ಬಹಳ ಖರ್ಚಾಗುತ್ತೆ, ಹೆಚ್ಚು ಇಂಧನ ಉಪಯೋಗಿಸುತ್ವೆ ಅಂತ ಬಳಕೆ ನಿಲ್ಲಿಸಲಾಗಿತ್ತು. ಆದ್ರೆ ಮತ್ತೆ ಇಂತ ವಿಮಾನಗಳು ಬಳಕೆಗೆ ಬರೋ ತರ ಕಾಣ್ತಿವೆ.

-masthmagaa.com

Contact Us for Advertisement

Leave a Reply