ನಾಲ್ವರು ಸಿಬ್ಬಂದಿಯೊಂದಿಗೆ 2024ರಲ್ಲಿ ಆರ್ಟೆಮಿಸ್‌ 2 ಮಿಷನ್: NASA

masthmagaa.com:

ಚಂದ್ರನ ಅಂಗಳಕ್ಕೆ ಮತ್ತೊಮ್ಮೆ ಮಾನವರನ್ನ ಕಳಿಸೋಕೆ ಮುಂದಾಗಿರೋ ನಾಸಾ, ಮುಂದಿನ ವರ್ಷ ಸಿಬ್ಬಂದಿ ಸಹಿತ ಮೂನ್‌ ಮಿಷನ್‌ ಲಾಂಚ್‌ ಮಾಡೋಕೆ ರೆಡಿಯಾಗಿದೆ. ಕಳೆದ ವರ್ಷ ಸಿಬ್ಬಂದಿ ರಹಿತ ಆರ್ಟೆಮಿಸ್‌ 1 ಮಿಷನ್‌ನ್ನ ನಾಸಾ ಲಾಂಚ್‌ ಮಾಡಿತ್ತು. ಇದು ಚಂದ್ರನ ಸುತ್ತ 25 ದಿನ ಸುತ್ತಿ ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿದೆ. ಈ ಮಿಷನ್‌ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಆರ್ಟೆಮಿಸ್‌ 2ನ್ನ ಲಾಂಚ್‌ ಮಾಡೋಕೆ ನಾಸಾ ಎದುರು ನೋಡುತ್ತಿದೆ. 2024ರ ನವಂಬರ್‌ನಲ್ಲಿ 4 ಸಿಬ್ಬಂದಿಯನ್ನ ಚಂದ್ರನ ಕಕ್ಷೆಗೆ ಕಳಿಸಲಿದೆ. ಈ ಮಿಷನ್‌ನಲ್ಲಿ ಗಗನಯಾತ್ರಿಗಳು ಚಂದ್ರನ ಮೇಲೆ ಲ್ಯಾಂಡ್‌ ಆಗಲ್ಲ. ಕೇವಲ ಚಂದ್ರನ ಕಕ್ಷೆಯಲ್ಲಿ ಇರಲಿದ್ದಾರೆ ಅಂತ ನಾಸಾ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply