ಆರ್ಟೆಮಿಸ್‌-1 ಮೂನ್‌ ಮಿಷನ್‌ ಪೂರ್ಣ: ನಾಸಾ

masthmagaa.com:

ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾದ ಆರ್ಟೆಮಿಸ್‌-1 ಮೂನ್‌ ಮಿಷನ್‌ ಪೂರ್ಣಗೊಂಡಿದೆ ಅಂತ ನಾಸಾ ಹೇಳಿದೆ. ಒರಾಯನ್‌ ಬಾಹ್ಯಾಕಾಶ ನೌಕೆ ಚಂದ್ರನಿಂದ 130 ಕಿಲೋಮೀಟರ್‌ ಅಂತರದಲ್ಲಿ ಹಾದು ಹೋಗಿದ್ದು ಭೂಮಿಗೆ ಮರಳ್ತಾ ಇದೆ ಅಂತ ನಾಸಾ ಹೇಳಿದೆ. ಈ ವೇಳೆ 30 ನಿಮಿಷಗಳ ಕಾಲ ನೌಕೆ ಜೊತೆಗಿನ ಸಂಪರ್ಕ ಕಡಿತವಾಗಿತ್ತು. ನಂತ್ರ ಯುರೋಪಿಯನ್‌ ಸರ್ವಿಸ್‌ ಮಾಡ್ಯೂಲ್‌ ಇಂಧನವನ್ನ ಪೂರೈಕೆ ಮಾಡಿದ್ದು ಈಗ ಸಂಪರ್ಕ ಸಿಕ್ಕಿದೆ. ಹಾಗೂ ಒರಾಯನ್‌ ನೌಕೆ ಚಂದ್ರನಿಗೆ ಗುಡ್‌ಬೈ ಹೇಳಿ ಭೂಮಿ ಕಡೆ ತನ್ನ ಜರ್ನಿಯನ್ನ ಶುರು ಮಾಡಿದೆ ಅಂತ ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply