ಒಳ್ಳೆ ಹುಡುಗ ಪ್ರಥಮ ಈಗ ‘ನಟ ಭಯಂಕರ’: ಸಧ್ಯದಲ್ಲೇ ಬರಲಿದೆ ಟ್ರೈಲರ್!

masthmagaa.com:

ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ” ನಟ ಭಯಂಕರ” ಚಿತ್ರದ ಥ್ರಿಲ್ಲಿಂಗ್ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹಾರಾರ್, ಕಾಮಿಡಿ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ‌ ಚಿತ್ರ ಜನವರಿ ಕೊನೆ ಅಥವಾ ಫೆಬ್ರವರಿ ಮೊದಲವಾರದಲ್ಲಿ ತೆರೆಗೆ ಬರಲಿದೆ. ಹೆಚ್ ಪಿ ನಿತೇಶ್ ಈ ಚಿತ್ರದ ಸಹ ನಿರ್ಮಾಪಕರು.

ಉದಯ್ ಕೆ ಮೆಹ್ತಾ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಪ್ರಥಮ್ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಪ್ರದ್ಯೋತನ್ ಸಂಗೀತ ನೀಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಒಂದು ಹಾಡನ್ನು ಹಾಡಿದ್ದಾರೆ. ಧ್ರುವ ಸರ್ಜಾರ ಧ್ವನಿ ಚಿತ್ರದುದ್ದಕ್ಕೂ ಕೇಳಿಸಲಿದೆ. ಡಾ|ವಿ.ನಾಗೇಂದ್ರ ಪ್ರಸಾದ್, ನಾಗತಿಹಳ್ಳಿ ಚಂದ್ರಶೇಖರ್, ಬಹದ್ದೂರ್ ಚೇತನ್ ಹಾಗೂ ಅರಸು ಅಂತಾರೆ ಹಾಡುಗಳನ್ನು ರಚಿಸಿದ್ದಾರೆ.

ಪ್ರಥಮ್ ಅವರೊಂದಿಗೆ ಹಿರಿಯ ನಟ ಸಾಯಿಕುಮಾರ್ ಸಹ ನಟಿಸಿದ್ದಾರೆ. ಡಕೋಟ ಎಕ್ಸ್‌ಪ್ರೆಸ್ ನ ನಂತರ ಓಂಪ್ರಕಾಶ್ ರಾವ್ ನಟಿಸಿರುವ ಕಾಮಿಡಿ ಚಿತ್ರವಿದು. ನಿಹಾರಿಕಾ ಶೆಣೈ, ಸುಶ್ಮಿತ ಜೋಶಿ, ಶೋಭ್ ರಾಜ್, ಕುರಿ ಪ್ರತಾಪ್, ಚಂದನ ರಾಘವೇಂದ್ರ, ಶಂಕರ್ ಅಶ್ವತ್ಥ್, ಮೋಹನ್ ಜುನೇಜ, ರಮ, ಬಿರಾದಾರ್, ಎಂ.ಎಸ್ ಉಮೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply