ಕೋಲ್ಡ್‌ವಾರ್‌ ಟೈಮ್‌ನ ಭದ್ರತಾ ಒಪ್ಪಂದಕ್ಕೆ ಕೋಕ್‌ ನೀಡಿದ NATO! ಕಾರಣವೇನು?

masthmagaa.com:

ಕೋಲ್ಡ್‌ವಾರ್‌ ಟೈಮ್‌ನಲ್ಲಿ ಮಾಡಿಕೊಳ್ಳಲಾಗಿದ್ದ‌ ಒಪ್ಪಂದವೊಂದನ್ನ ಕೈಬಿಟ್ಟಿರೋದಾಗಿ ನ್ಯಾಟೋ ಹೇಳಿದೆ. ಯಾವದೇ ಒಂದು ದೇಶ ತಮ್ಮ ಪಡೆಗಳನ್ನು ಇತರ ದೇಶಗಳ ಬಾರ್ಡರ್‌ ಬಳಿ ತರದಂತೆ ರೂಪಿಸಿದ್ದ Conventional Armed Forces in Europe(CEF) ಒಪ್ಪಂದವನ್ನ ನ್ಯಾಟೊ ಸಸ್ಪೆಂಡ್‌ ಮಾಡಿದೆ. ಈ ಒಪ್ಪಂದದಲ್ಲಿ ರಷ್ಯಾ ಕೂಡ ಇತ್ತು. ಆದ್ರೆ ನಿನ್ನೆಯಷ್ಟೇ ರಷ್ಯಾ ವಿದೇಶಾಂಗ ಸಚಿವಾಲಯ ಈ ಒಪ್ಪಂದದಿಂದ ಹೊರ ಬರೋದಾಗಿ ಅನೌನ್ಸ್‌ ಮಾಡಿತ್ತು. ಎಲ್ಲಾ ದೇಶಗಳು ಇದಕ್ಕೆ ಬದ್ಧವಾಗಿರೋವಾಗ ರಷ್ಯಾ ಆಚೆ ಇರೋದು ,ಈಗಿನ ಪರಿಸ್ಥಿತಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಅಂದ್ರೆ ರಷ್ಯಾ ಈಗಾ ಯಾವ ದೇಶ ಬಾರ್ಡರ್‌ ಬಳಿಗಾದ್ರು ಬಂದು ಟಿಕಾಣಿ ಹೂಡ್ಬೋದು ಎಂಬಂತಾಗಿದೆ. ಸೋ ಅದ್ರಿಂದ ರಕ್ಷಣೆ ಮಾಡ್ಕೋಬೇಕು ಅಂದ್ರೆ ಈ ಒಪ್ಪಂದ ಸಸ್ಪೆಂಡ್‌ ಮಾಡೋದೆ ಒಳ್ಳೆಯದು. ಹೀಗಾಗಿ ಈ ಒಪ್ಪಂದ ಸಸ್ಪೆಂಡ್‌ ಮಾಡಿರೋದಾಗಿ ನ್ಯಾಟೊ ಹೇಳಿದೆ. ಅಲ್ಲದೆ, ಎಷ್ಟು ದಿನಗಳವರೆಗೆ ಅಗತ್ಯ ಇರುತ್ತೊ, ಅಲ್ಲಿವರೆಗೆ ಈ ಟ್ರೀಟಿ ಅಮಾನತಿನಲ್ಲಿರುತ್ತೆ. ಎಲ್ಲಾ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಅಂತ ನ್ಯಾಟೊ ಹೇಳಿದೆ. ಅಂದ್ಹಾಗೆ ಈ ಮೂಲಕ ಯಾರು ಯಾವ ದೇಶದ ಬಾರ್ಡರ್‌ ಬಳಿಯಾದ್ರೂ ತಮ್ಮ ಪಡೆಗಳನ್ನ ನಿಯೋಜಿಸಲು ಪರ್ಮಿಷನ್‌ ಕೊಟ್ಟಂತಾಗಿದೆ. ಈಗಾಗಲೇ ಜಾಗತಿಕವಾಗಿ ಪ್ರಕ್ಷುಬ್ಧತೆ ಇರೋ ಟೈಮ್‌ನಲ್ಲಿ ಈ ರೀತಿಯ ಬೆಳವಣಿಗೆಗೆ ಆತಂಕಕ್ಕೆ ಕಾರಣವಾಗಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply