ಇಂಡಿಯನ್‌ ನೇವಿ ಸೇರಲಿವೆ ʻನೀರೊಳಗಿನ ರಥಗಳುʼ!

masthmagaa.com:

ಇತ್ತೀಚೆಗೆ ಕಡಲಿನಲ್ಲಿ ಪದೇ ಪದೇ ಅಕ್ಕಪಕ್ಕದ ದೇಶಗಳೊಂದಿಗೆ ಸಂಘರ್ಷಕ್ಕಿಳಿಯೋ ಚೀನಾಗೆ ಪಾಠ ಕಲಿಸೋಕೆ ಭಾರತ ಹೊಸ ಆಯುಧ ನಿರ್ಮಿಸೋಕೆ ಹೊರಟಿದೆ. ಭಾರತೀಯ ನೌಕಾಪಡೆ ಸ್ವದೇಶಿ ನಿರ್ಮಿತ ಮಿಡ್‌ ಜೆಟ್‌ ಸಬ್‌ಮರೀನ್‌ಗಳನ್ನ ನಿಯೋಜನೆ ಮಾಡಿಕೊಳ್ಳೋ ಯೋಜನೆ ಹೂಡಿದೆ. ನೀರೊಳಗಿನ ರಥಗಳು ಅಂತಾನೇ ಕರೆಸಿಕೊಳ್ಳೋ ಈ ಮಿನಿ ಸಬ್‌ಮರೀನ್‌ಗಳು ಸಾಗರ ಕಮಾಂಡೋಗಳಾದ MARCOSಗಳ ಸಮುದ್ರ ತಟದ ಆಪರೇಶನ್‌ಗಳಿಗೆ ಬೂಸ್ಟ್‌ ನೀಡಲಿವೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಐದರಿಂದ ಆರು ಜನರನ್ನ ಹೊತ್ತು ಬಹಳ ಸಮಯದವರೆಗೆ ನೀರಿನ ಒಳಗೆ ಕಾರ್ಯಾಚರಣೆ ಮಾಡೋ ಕ್ಷಮತೆಯನ್ನ ಈ ಮಿಡ್‌ಜೆಟ್‌ಗಳು ಹೊಂದಿದ್ದು, ಲಿಥಿಯಮ್‌ ಅಯಾನ್‌ ಬ್ಯಾಟರಿ ಸಹಾಯದಿಂದ ಕಾರ್ಯನಿರ್ವಹಿಸುತ್ವೆ. ಜಗತ್ತಿನ ಅಡ್ವಾನ್ಸ್‌ಡ್ ಸೇನೆಗಳು ಈ ಮಿಡ್‌ಜೆಟ್‌ಗಳನ್ನ‌ ಈಗಾಗ್ಲೆ ನಿಯೋಜಿಸಿಕೊಂಡಿವೆ. ವೈರಿ ಪಡೆಗಳ ಹಡಗುಗಳು ಹಾಗೂ ಕರಾವಳಿ ಭಾಗದಲ್ಲಿ ಅಳವಡಿಸಲಾಗೋ ಉಪಕರಣಗಳನ್ನ ಡೆಸ್ಟ್ರಾಯ್‌ ಮಾಡೋಕೆ ಇವುಗಳನ್ನ ಬಳಸಿಕೊಳ್ಬೋದು ಎನ್ನಲಾಗ್ತಿದೆ. ಎದುರಾಳಿಗೆ ತಿಳಿಯದಂತೆ ಅವರ ಹಡಗು ತಾಣಗಳ ಬಳಿ ಹೋಗಿ ಸರ್ವೇಲೆನ್ಸ್‌ ಮಾಡೋಕು ಇವನ್ನ ಉಪಯೋಗಿಸಬಹುದಾಗಿದೆ. ಸಾಮಾನ್ಯ ಸಬ್‌ಮರಿನ್‌ಗಳು ಆಳವಾದ ನೀರಿನಲ್ಲೇ ಇರಬೇಕಾಗುತ್ತೆ. ಆದ್ರೆ ಈ ಮಿಡ್‌ಜೆಟ್‌ಗಳಿಗೆ ಕೆಲವು ಮೀಟರ್‌ಗಳಷ್ಟು ಆಳವಾದ ನೀರಿದ್ರೆ ಸಾಕು. ಹೋಗಿ ತಮ್ಮ ಕೆಲಸ ಮುಗಿಸಿ ವಾಪಾಸ್‌ ಬಂದು ಸೇರ್ಬೋದು. ಹಿಂದುಸ್ಥಾನ್‌ ಶೀಪ್‌ಯಾರ್ಡ್‌ ಲಿಮಿಟೆಡ್‌ ಕಂಪನಿ ನೇವಿಗೆ ಬೇಕಾದ ಮಿಡ್‌ಜೆಟ್‌ಗಳನ್ನ ತಯಾರು ಮಾಡಲಿದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply