ಆಂಧ್ರದಲ್ಲಿ NDA ಪ್ರಣಾಳಿಕೆ ರಿಲೀಸ್: ಮಹಿಳೆಯರಿಗೆ‌ ಬಸ್ ಪ್ರಯಾಣ‌ ಫ್ರಿ!

masthmagaa.com:

ಪಕ್ಕದ ಆಂಧ್ರ ಪ್ರದೇಶದಲ್ಲಿ ವಿಧಾನಸಭೆಗೂ ಚುನಾವಣೆ ನಡೆಯಲಿದ್ದು ಎನ್‌ಡಿಎ ಮೈತ್ರಿಯ ಪಕ್ಷಗಳು ಜಂಟಿ ಪ್ರಣಾಳಿಕೆಯನ್ನ ರಿಲೀಸ್‌ ಮಾಡಿವೆ. ತೆಲಗುದೇಶಂ, ಜನಸೇನಾ ಹಾಗೂ ಬಿಜೆಪಿಯನ್ನೊಳಗೊಂಡ 3 ಪಕ್ಷಗಳು ಎನ್‌ಡಿಎ ಮೈತ್ರಿಯ ಭಾಗವಾಗಿವೆ. ಹೀಗಾಗಿ ತಾವು ಅಧಿಕಾರಕ್ಕೆ ಬಂದ್ರೆ ನಿರುದ್ಯೋಗಿ ಯುವಕರಿಗೆ ಮಾಸಿಕ 3 ಸಾವಿರ ರೂಪಾಯಿ ಹಣಕಾಸಿನ ನೆರವು, ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ, ಪ್ರತಿ ಮನೆಗೆ ವಾರ್ಷಿಕ 3 ಉಚಿತ ಸಿಲಿಂಡರ್‌ ಮತ್ತು ವಿದ್ಯಾಭ್ಯಾಸ ಮಾಡ್ತಿರೊ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 15ಸಾವಿರ ಸಹಾಯಧನದ ಭರವಸೆ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನ ಘೋಷಣೆ ಮಾಡಿವೆ. ಅಂದ್ಹಾಗೆ ಒಟ್ಟು 175 ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರೊ ಆಂಧ್ರದಲ್ಲಿ ಮೇ 13ಕ್ಕೆ ಮತದಾನ ನಡೆಯಲಿದ್ದು, ಜೂನ್‌ 4ಕ್ಕೆ ಫಲಿತಾಂಶ ಹೊರಬೀಳಲಿದೆ.

-masthmagaa.com

Contact Us for Advertisement

Leave a Reply