ಅಮೆರಿಕ: ಗುಂಡಿನ ದಾಳಿ ಬೆನ್ನಲ್ಲೇ ವೆಪನ್‌ ಕಂಟ್ರೋಲ್‌ಗೆ ಬೈಡೆನ್‌ ಕರೆ

masthmagaa.com:

ಟೆಕ್ಸಾಸ್‌ನ ಶಾಪಿಂಗ್‌ ಮಾಲ್‌ನಲ್ಲಿ ನಡೆದ ಗುಂಡಿನ ದಾಳಿ ಬೆನ್ನಲ್ಲೇ ಅಧ್ಯಕ್ಷ ಜೋ ಬೈಡೆನ್‌ ಮತ್ತೆ ವೆಪನ್‌ಗಳನ್ನ ಬ್ಯಾನ್‌ ಮಾಡುವುದು ಹಾಗೂ ಇತರ ಗನ್‌ ಸುರಕ್ಷತಾ ಕ್ರಮಗಳನ್ನ ತರುವ ಬಗ್ಗೆ ಧ್ವನಿ ಎತ್ತಿದ್ದಾರೆ. ಅಲ್ದೇ ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ಸೂಚಿಸಲು ಅಮೆರಿಕದಲ್ಲಿ ಧ್ವಜಗಳಲ್ಲಿ ಅರ್ಧಕ್ಕೆ ಹಾರಿಸಲು ಆದೇಶ‌ ನೀಡಿದ್ದಾರೆ. ಇದೇ ವೇಳೆ ಅಲ್ಲಿನ ಸಂಸದರಿಗೆ ವೆಪನ್‌ಗಳನ್ನ ಹಾಗೂ ಹೆಚ್ಚು ಸಾಮರ್ಥ್ಯದ ಗನ್‌ಗಳನ್ನ ಬ್ಯಾನ್‌ ಮಾಡುವ ಮಸೂದೆಯನ್ನ ಮತ್ತೆ ತನ್ನಿ, ನಾನು ತಕ್ಷಣವೇ ಸೈನ್‌ ಮಾಡ್ತೀನಿ ಅಂತ ಕರೆ ನೀಡಿದ್ದಾರೆ. ಜೊತೆಗೆ ಗನ್‌ ಖರೀದಿ ವೇಳೆ ಅವರ ಬ್ಯಾಕ್‌ಗ್ರೌಂಡ್‌ನ್ನ ಕಂಪ್ಲೀಟ್‌ ಆಗಿ ಚೆಕ್‌ ಮಾಡುವಂತೆ ಸೂಚಿಸಿದ್ದಾರೆ. ಅಂದ್ಹಾಗೆ ಬಂದೂಕುಧಾರಿಯೊಬ್ಬ ಟೆಕ್ಸಾಸ್‌ನ ಮಾಲ್‌ನಲ್ಲಿ ಮನಬಂದಂತೆ ಶೂಟ್‌ ಮಾಡಿದ್ದು, 7 ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಪೊಲೀಸರು ಆರೋಪಿಯನ್ನ ಹತ್ಯೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply