ಉದಯನಿಧಿ ʻಸನಾತನ ಧರ್ಮʼ ಹೇಳಿಕೆಗೆ PM ಮೋದಿ ಹೇಳಿದ್ದೇನು?

masthmagaa.com:

ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ಅವ್ರು ಸನಾತನ ಧರ್ಮವನ್ನ ಅವಹೇಳನ ಮಾಡಿದ್ದ ಹೇಳಿಕೆಗೆ ಸಂಬಂಧಿಸಿದ ವಿವಾದ ಮುಂದುವರೆದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಉದಯನಿಧಿಯವರಿಗೆ ತಕ್ಕ ಉತ್ತರ ಕೊಡುವಂತೆ ಕ್ಯಾಬಿನೆಟ್‌ ಸಭೆಯಲ್ಲಿ ಸಚಿವರಿಗೆ ಹೇಳಿದ್ದಾರೆ. ಇತ್ತ ತಮ್ಮ ಹೇಳಿಕೆಯಿಂದ ವಿವಾದದ ದೊಡ್ಡ ಅಲೆಯನ್ನೇ ಎಬ್ಬಿಸಿರುವ ಉದಯನಿಧಿ ಮತ್ತೊಮ್ಮೆ ತಮ್ಮ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ. ನೂತನ ಸಂಸತ್‌ ಭವನ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನು ಆಹ್ವಾನಿಸದೆ ಇರೋದೆ ಸತಾನತ ಧರ್ಮದ ಜಾತಿ ವ್ಯವಸ್ಥೆಯಲ್ಲಿರುವ ತಾರತಮ್ಯಕ್ಕೆ ಉದಾಹರಣೆ ಅಂತ ಹೇಳಿದ್ದಾರೆ. ಇತ್ತ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಉದಯನಿಧಿ ಹಾಗೂ ಕಾಂಗ್ರೆಸ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವ್ರ ವಿರುದ್ಧ ಉತ್ತರಪ್ರದೇಶದ ರಾಂಪುರದಲ್ಲಿ FIR ದಾಖಲಿಸಲಾಗಿದೆ. ಉದಯನಿಧಿ ಹೇಳಿಕೆಗೆ ಬೆಂಬಲಿಸಿರುವ ಆರೋಪದ ಮೇಲೆ ಪ್ರಿಯಾಂಕ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ. ಇನ್ನೊಂದ್‌ ಕಡೆ ನಮ್ಮ ಸನಾತನ ಧರ್ಮದಲ್ಲಿ ಪ್ರಶ್ನೆ ಮಾಡಲು ಹಾಗೂ ಟೀಕೆ ಮಾಡಲು ಅವಕಾಶ ಇದೆ. ನೀನು ಅರಬ್, ಸೌದಿ ಭಾಗದಲ್ಲಿ ಹುಟ್ಟಿದ್ದರೆ ಖೇಲ್ ಖತಂ ಆಗುತ್ತಿತ್ತು. ಈ ಕಾರಣಕ್ಕೆ ಸಚಿವ ಉದಯನಿಧಿ ಸ್ಟಾಲಿನ್​​ ಲಕ್ಕಿ ಅಂತ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ. ಇದೇ ವೇಳೆ ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ ನೀನು ಹುಟ್ಟಿದ್ದೀಯಾ. ಒಂದು ವೇಳೆ ಬೇರೆ ಕಡೆ ಹುಟ್ಟಿದ್ದರೆ ಕಥೆ ಮುಗಿಯುತ್ತಿತ್ತು. ಆದರೂ ಯಾರೋ ತಲೆಗೆ ಬೆಲೆ ಕಟ್ಟಿದ್ದಾರೆ. ನಮ್ಮ ದೇಶದಲ್ಲಿ ಅಷ್ಟು ಬೇಗ ಯಾರೂ ತಲೆ ತೆಗೆಯುವುದಿಲ್ಲ ಅಂತ ವಾಗ್ದಾಳಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply