2024ರ T-20 ವರ್ಲ್ಡ್‌ಕಪ್‌ಗೆ ನೇಪಾಳ, ಒಮನ್‌ ಎಂಟ್ರಿ!

masthmagaa.com:

2024ರಲ್ಲಿ ವೆಸ್ಟ್‌ ಇಂಡೀಸ್‌, ಅಮೆರಿಕ ಆತಿಥ್ಯದಲ್ಲಿ ನಡೆಯಲಿರೊ T-20 ಕ್ರಿಕೆಟ್ ವಿಶ್ವಕಪ್‌ಗೆ ನೇಪಾಳ, ಒಮನ್‌ ದೇಶಗಳು ಅಫಿಶಿಯಲ್‌ ಆಗಿ ಎಂಟ್ರಿ ಕೊಟ್ಟಿವೆ. ಬರೋಬ್ಬರು 10 ವರ್ಷಗಳ ನಂತರ ನೇಪಾಳ ಕ್ವಾಲಿಫೈ ಆದ್ರೆ, ಒಮನ್‌ ಇದೇ ಮೊದಲ ಬಾರಿಗೆ ಬಿಗ್‌ ಟೂರ್ನಮೆಂಟ್‌ನ ಭಾಗವಾಗಲಿದೆ. ಏಷ್ಯಾ ಕ್ವಾಲಿಫಯರ್‌ನ ಮೊದಲ ಸೆಮಿಫೈನಲ್‌ನಲ್ಲಿ ಬಹ್ರೇನ್‌ ತಂಡ ನೀಡಿದ್ದ 107 ರನ್‌ಗಳ ಗುರಿಯನ್ನ ನೋ ಲಾಸ್‌ನಲ್ಲಿ ಚೇಸ್‌ ಮಾಡಿ ಒಮಾನ್‌ ಕ್ವಾಲಿಫೈ ಆಗಿದೆ. ಇನ್ನು ಎರಡನೇ ಸೆಮಿ ಫೈನಲ್‌ನಲ್ಲಿ ನೇಪಾಳ UAE ವಿರುದ್ಧ ಗೆದ್ದು ವಿಶ್ವಕಪ್‌ಗೆ ಕಾಲಿಟ್ಟಿದೆ. ಅಂದ್ಹಾಗೆ ಇದುವರೆಗೆ 18 ಟೀಮ್‌ಗಳು ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದು, ಈ ತಿಂಗಳ ಕೊನೆಯಲ್ಲಿ ನಡೆಯಲಿರೊ ಆಫ್ರಿಕ ಕ್ವಾಲಿಫೈಯರ್‌ನಲ್ಲಿ ಇನ್ನೆರಡು ತಂಡಗಳು ಯಾವುವು ಅಂತ ಡಿಸೈಡ್‌ ಆಗಲಿದೆ.

-masthmagaa.com

Contact Us for Advertisement

Leave a Reply