ಮೂರನೇ ಬಾರಿಗೆ ವಿಶ್ವಾಸ ಮತಯಾಚಿಸಲಿರುವ ನೇಪಾಳ ಪ್ರಧಾನಿ!

masthmagaa.com:

ಕಳೆದ ವರ್ಷ ಅಧಿಕಾರ ವಹಿಸಿಕೊಂಡಿರೊ ನೇಪಾಳದ ಪ್ರಧಾನಿ ಪುಷ್ಟ ಕುಮಾರ್‌ ದಹಲ್‌ ಪ್ರಚಂಡ ಅವ್ರು ಮತ್ತೊಮ್ಮೆ ಸಂಸತ್ತಿನಲ್ಲಿ ಬಹುಮತವನ್ನ ಸಾಬೀತುಪಡಿಸಬೇಕಾಗಿದೆ. ಸರ್ಕಾರದ ಮೈತ್ರಿ ಪಕ್ಷವಾದ ರಾಷ್ಟ್ರೀಯ ಸ್ವತಂತ್ರ ಪಕ್ಷ ಮೈತ್ರಿ ಕೂಟದಿಂದ ಹಿಂದೆ ಸರಿದಿದೆ. ಹೀಗಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಚಂಡ ಮೂರನೇ ಬಾರಿಗೆ ವಿಶ್ವಾಸ ಮತಯಾಚನೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇನ್ನು ಸರ್ಕಾರದಿಂದ ಹಿಂದೆ ಸರಿದಿರುವ ರಾಷ್ಟ್ರೀಯ ಸ್ವತಂತ್ರ ಪಕ್ಷ ಪ್ರಚಂಡ ಅವ್ರಿಗೆ ತಮ್ಮ ಬೆಂಬಲವನ್ನ ಮುಂದುವರೆಸಿದೆ. ಹೀಗಾಗಿ ಸರ್ಕಾರಕ್ಕೆ ಯಾವುದೇ ತೊಂದರೆಯಲ್ಲಿ ಅಂತ ಹೇಳಲಾಗಿದೆ. ಅಂದ್ಹಾಗೆ ಈ ಮೊದಲು ಜನವರಿ ಹಾಗೂ ಮಾರ್ಚ್‌ನಲ್ಲಿ ನಡೆದ ವಿಶ್ವಾಸ ಮತಯಾಚನೆಯಲ್ಲೂ ಪ್ರಚಂಡ ಬಹುಮತ ಸಾಬೀತು ಪಡೆಸಿದ್ರು.

-masthmagaa.com

Contact Us for Advertisement

Leave a Reply