ಸುಮ್ಮನೆ ನಮ್ಮ ಕೈಯಲ್ಲಿ ಸಾಯ್ಬೇಡಿ, ಸರೆಂಡರ್‌ ಆಗಿ: ಬೆಂಜಮಿನ್‌ ನೆತನ್ಯಾಹು

masthmagaa.com:

ಸುಮ್ಮನೇ ನಮ್ಮ ಕೈಯಲ್ಲಿ ಸಾಯ್ಬೇಡಿ, ಈಗ್ಲೇ ಸರೆಂಡರ್‌ ಆಗಿ ಅಂತ ಇದೀಗ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹಮಾಸ್‌ಗೆ ವಾರ್ನ್‌ ಮಾಡಿದ್ದಾರೆ. ಇಸ್ರೇಲ್‌-ಹಮಾಸ್‌ ಯುದ್ಧ ತೀವ್ರವಾಗ್ತಿರೋ ಬೆನ್ನಲ್ಲೇ ಬೆಂಜಮಿನ್‌ ನೆತನ್ಯಾಹು ಈ ರೀತಿ ಹೇಳಿಕೆ ನೀಡಿದ್ದಾರೆ. ʻಯುದ್ಧ ಈಗ್ಲೂ ನಡೀತಾ ಇದೆ. ಆದ್ರೆ ಈಗ ಹಮಾಸ್‌ ಅಂತ್ಯವಾಗೋ ಟೈಮ್‌ ಸ್ಟಾರ್ಟ್‌ ಆಗಿದೆ. ಆದ್ರಿಂದ ಹಮಾಸ್‌ ನಿಮ್ಮ ಶಸ್ತ್ರಾಸ್ತ್ರಗಳನ್ನ ಬಿಟ್ಟುಬಿಡಿ. ಗಾಜಾದಲ್ಲಿ ನಿಮ್ಮ ನೂರಾರು ಫೈಟರ್ಸ್‌ ನಮಗೆ ಸರೆಂಡರ್‌ ಆಗಿ, ಅವ್ರನ್ನ ನಾವು ಅರೆಸ್ಟ್‌ ಮಾಡಿದ್ದೇವೆ. ಸುಮ್ಮನೆ ನಿಮ್ಮ ನಾಯಕ ಯಾಹ್ಯಾ ಸಿನ್ವರ್‌ಗಾಗಿ ಪ್ರಾಣ ಕಳೆದುಕೊಳ್ಬೇಡಿ. ಈಗಲೇ ಸರೆಂಡರ್‌ ಆಗಿʼ ಅಂತ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.

ಇನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಇಸ್ರೇಲ್‌-ಹಮಾಸ್‌ ಕದನವಿರಾಮಕ್ಕೆ ರಷ್ಯಾ ಸಪೋರ್ಟ್‌ ಮಾಡಿದ್ದಕ್ಕೆ ಬೆಂಜಮಿನ್‌ ನೆತನ್ಯಾಹು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಕಾಲ್‌ ಮಾಡಿ ತಮ್ಮ ಅಸಮಧಾನ ಹೊರಹಾಕಿದ್ರು ಅಂತ ಇಸ್ರೇಲ್‌ ಹೇಳಿಕೊಂಡಿದೆ. ಇದ್ರೊಂದಿಗೆ ಇರಾನ್‌ ಜೊತೆಗಿರೋ ರಷ್ಯಾದ ʻಡೇಂಜರಸ್‌ʼ ಸಹಕಾರವನ್ನ ನಾವು ಸ್ಟ್ರಾಂಗ್‌ ಆಗಿ ಖಂಡಿಸ್ತೀವಿ ಅಂತಾನೂ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಉತ್ತರಿಸಿದ ಪುಟಿನ್‌, ʻಗಾಜಾ ನಾಗರಿಕರ ನೋವು ಹಾಗೂ ಅಲ್ಲಿನ ಸಂಘರ್ಷ ಕಡಿಮೆ ಮಾಡೋಕೆ, ನಾವು ಎಲ್ಲಾ ರೀತಿಯ ಸಹಾಯ ನೀಡೋಕೆ ರೆಡಿ ಇದೀವಿ. ಆದ್ರೆ ಇದ್ರ ಜೊತೆಗೆ ಉಗ್ರರ ಮೇಲೆ ಪ್ರತಿದಾಳಿ ನಡೆಸೋವಾಗ ಗಾಜಾ ನಾಗರಿಕರಿಗೆ ಏನು ಆಗಬಾರದು ಅನ್ನೋದು ಕೂಡ ತುಂಬಾ ಇಂಪಾರ್ಟೆಂಟ್‌ ಅಂತ ಹೇಳಿದ್ದಾರೆ ಎನ್ನಲಾಗಿದೆ.

ಇನ್ನೊಂದ್ಕಡೆ ಹಮಾಸ್‌ ಗಾಜಾನ ನಾಶ ಮಾಡ್ತು ಅಂತ ಹಮಾಸ್‌ನವ್ರೇ ಹೇಳಿದ್ದಾರೆ. ಹಮಾಸ್‌ ಮಾಜಿ ಮುಖ್ಯಸ್ಥ ಯೂಸೆಫ್‌ ಅಲ್‌ ಮಾನ್ಸಿ ಹೇಳಿಕೆ ನೀಡಿರೋ ವಿಡಿಯೋ ಇದೀಗ ರಿಲೀಸ್‌ ಆಗಿದ್ದು ಅದ್ರಲ್ಲಿ, ʻಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಕಿಚ್ಚು ಹಚ್ಚಿದ್ದೇ ಹಮಾಸ್‌ ನಾಯಕ ಯಾಹ್ಯಾ ಸಿನ್ವರ್‌. ಸಿನ್ವರ್‌ ಮತ್ತವರ ಗುಂಪು ಸೇರ್ಕೊಂಡು ಗಾಜಾವನ್ನ 200 ವರ್ಷಗಳ ಹಿಂದಕ್ಕೆ ತಗೊಂಡ್‌ ಹೋಗಿದ್ದಾರೆ. ಅಂದ್ರೆ ಅಷ್ಟ್ರ ಮಟ್ಟಿಗೆ ಗಾಜಾದಲ್ಲಿ ಹಾನಿ ಮಾಡಿದ್ದಾರೆ. ಅವ್ರಿಗೆ ಗಾಜಾ ಜನರ ಸಪೋರ್ಟ್‌ ಕೂಡ ಇಲ್ಲ ಅಂತ ಹೇಳಿದ್ದಾರೆ.

ಇನ್ನು ಇಸ್ರೇಲ್‌-ಹಮಾಸ್‌ ಯುದ್ಧ ಕಂಟಿನ್ಯೂ ಆಗಿದ್ದು, ಡಿಸೆಂಬರ್‌ 10 ರಂದು 250ಕ್ಕೂ ಹೆಚ್ಚು ಹಮಾಸ್‌ ನೆಲೆಗಳ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 300 ಮಂದಿ ಮೃತಪಟ್ಟಿದ್ದು, 550ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಅಂತ ಗಾಜಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply