ಇಂಟರ್‌ ನ್ಯಾಟನಲ್‌ ಕೋರ್ಟ್‌ನ ಕರೆಗೆ ಕ್ಯಾರೆ ಎನ್ನದ ಇಸ್ರೇಲ್‌ ಪ್ರಧಾನಿ!

masthmagaa.com:

ಗಾಜಾದಲ್ಲಿ ಭೀಕರ ವಾತಾವರಣದ ಹೆಚ್ಚಾಗ್ತಿದ್ದಂತೆ ಇಸ್ರೇಲ್‌-ಹಮಾಸ್‌ ಪಡೆಗಳು ಯುದ್ದ ನಿಲ್ಲಿಸಲು ಮುಂದಾಗಲಿವೆ ಅಂತ ಅಮೆರಿಕ ನಂಬಿರೋ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದೆ. ಉಭಯ ಪಡೆಗಳು 2 ತಿಂಗಳು ಯುದ್ದ ವಿರಾಮ ಘೋಷಿಸಲು ಮಾತುಕತೆ ನಡೆಸಿ ತೀರ್ಮಾನ ಮಾಡಲಿದ್ದು, ಈ ಕುರಿತಾದ ಒಪ್ಪಂದ ಪತ್ರವನ್ನ ಅಮೆರಿಕದ ಯುದ್ದ ಸಂಧಾನಕಾರರು ರೆಡಿ ಮಾಡಿದ್ದಾರೆ ಅಂತ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ. ಅಂದ್ಹಾಗೆ ಈ ಡೀಲ್‌ಗೆ ಇನ್ನೆರಡು ವಾರಗಳಲ್ಲಿ ಅಂತಿಮ ಮುದ್ರೆ ಬೀಳ್ಬಹುದು. ಅಲ್ಲದೇ ಈ ಡೀಲ್‌ ಪ್ರಕಾರ ಹಮಾಸ್‌ನಿಂದ 100 ಒತ್ತೆಯಾಳು ರಿಲೀಸ್‌ ಆಗಲಿರೋ ಬಗ್ಗೆಯು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದೆಡೆ ಈ ಯುದ್ದ ನಿಲ್ಲಿಸುವ ಬಗ್ಗೆ ಕತಾರ್‌-ಅಮೆರಿಕ ಮಾತುಕತೆ ನಡೆಸಿದ ಬೆನ್ನಲ್ಲೆ ಹಮಾಸ್‌ ಉಗ್ರರಿಗೆ ಕತಾರ್‌ ಆರ್ಥಿಕ ನೆರವು ನಿಡ್ತಿದೆ ಅಂತ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ.

ಇನ್ನೊಂದೆಡೆ ಗಾಜಾದಲ್ಲಿ ಯುದ್ದ ನಿಲ್ಲಿಸಲು ಹೇಳಿದ್ದ ಇಂಟರ್‌ ನ್ಯಾಷನಲ್‌ ಕೋರ್ಟ್‌ನ ಕರೆಯನ್ನ ನೆತನ್ಯಾಹು ಅಲ್ಲಗೆಳೆದಿದ್ದಾರೆ. ನಾವ್‌ ವಿಜಯಶಾಲಿ ಆಗೋವರೆಗೂ ಯುದ್ದ ನಿಲ್ಲಿಸಲ್ಲ. ನಮ್ಮ ರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳನ್ನ ನಾವೇ ಕೈಗೊಳ್ತಿವಿ ಅಂತ ಅಬ್ಬರಿಸಿದ್ದಾರೆ. ಅಲ್ಲದೆ ಹಮಾಸ್‌ಗಳು ಹೊಸ ನಾಜಿಗಳು ಇದ್ದಂತೆ. ಗಾಜಾದಲ್ಲಿ ಇಸ್ರೇಲ್‌ ನರಮೇಧ ನಡೆಸಿದೆ ಅಂದಿದ್ದ ದಕ್ಷಿಣ ಆಫ್ರಿಕಾ ಈ ಹೊಸ ನಾಜಿಗಳಿಗೆ ಅಂದ್ರೆ ಹಮಾಸ್‌ಗೆ ಸಹಾಯ ಮಾಡುತ್ತೆ ಅಂತ ನೆತನ್ಯಾಹು ತಿರುಗೇಟು ನೀಡಿದ್ದಾರೆ.

-masthmagaa.com

Contact Us for Advertisement

Leave a Reply