ರಷ್ಯಾ ಅಧಿಕಾರಿಗಳಿಗೆ 2 ವಾರದಲ್ಲಿ ದೇಶ ಬಿಟ್ಟು ಹೋಗಿ ಎಂದ ನೆದರ್‌ಲ್ಯಾಂಡ್ಸ್‌! ಯಾಕೆ?

masthmagaa.com:

ನೆದರ್‌ಲ್ಯಾಂಡ್ಸ್‌ನಲ್ಲಿರೊ ರಷ್ಯಾದ ಅಧಿಕಾರಿಗಳಿಗೆ ದೇಶವನ್ನ ತೊರೆಯುವಂತೆ ಅಲ್ಲಿನ ಸರ್ಕಾರ ಹೇಳಿದೆ. ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (ICC) ಹಾಗೂ ಜಾಗತಿಕ ರಾಸಾಯನಿಕ ಶಸ್ತ್ರಾಸ್ತ್ರಗಳ ಕಣ್ಗಾವಲು ಸಂಸ್ಥೆ ಇರೊ ದೇಶದಲ್ಲಿ ರಷ್ಯಾ ಗೂಢಚಾರಿಗಳನ್ನ ನುಸುಳಿಸೋಕೆ ಪ್ರಯತ್ನ ಪಡ್ತಿದೆ ಅಂತ ನೆದರ್‌ಲ್ಯಾಂಡ್ಸ್‌ ರಷ್ಯಾ ಮೇಲೆ ಗಂಭೀರ ಆರೋಪ ಮಾಡಿದೆ. ರಷ್ಯಾ, ಅಧಿಕಾರಿಗಳ ಹೆಸರಿನಲ್ಲಿ ತನ್ನ ಗುಪ್ತಚರ ಆಫೀಸರ್‌ಗಳನ್ನ ನೆದರ್‌ಲ್ಯಾಂಡ್ಸ್‌ಗೆ ಕರೆದುಕೊಂಡು ಬರ್ತಿತ್ತು. ಇದಕ್ಕೆ ಸಲ್ಯುಷನ್‌ ಹುಡುಕೋಕೆ ತುಂಬಾ ಪ್ರಯತ್ನ ಪಟ್ಟೀದ್ದಿವಿ, ಆದ್ರೆ ಆಗಿಲ್ಲ. ಹೀಗಾಗಿ ಈ ರೀತಿ ಕ್ರಮ ತಗೊಂಡಿದ್ದೀವಿ ಅಂತ ಅಲ್ಲಿನ ವಿದೇಶಾಂಗ ಸಚಿವ ಹೇಳಿದ್ದಾರೆ. ರಷ್ಯಾ ಅಧಿಕಾರಿಗಳಿಗೆ ದೇಶದಿಂದ ಹೋಗೋಕೆ 2 ವಾರಗಳ ಟೈಮ್‌ ಕೊಡಲಾಗಿದೆ. ಜೊತೆಗೆ ಆಮ್‌ಸ್ಟೆರ್‌ಡ್ಯಾಮ್‌ನಲ್ಲಿರೊ ರಷ್ಯಾದ ಟ್ರೇಡ್‌ ಆಫೀಸ್‌ನ್ನ ಮುಂದಿನ ಮಂಗಳವಾರದ ಒಳಗೆ ಮುಚ್ಚುವಂತೆ ಆದೇಶಿಸಲಾಗಿದೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದಾರೆ. ಇದ್ರ ಬೆನ್ನಲ್ಲೇ ನೆದರ್‌ಲ್ಯಾಂಡ್‌ ವಿರುದ್ದ ರಷ್ಯಾ ಬೆಂಕಿ ಉಗುಳಿದ್ದು ನೆದರ್‌ಲ್ಯಾಂಡ್ಸ್‌ನ ಈ ಕ್ರಮಕ್ಕೆ ಸರಿಯಾದ ಪ್ರತಿಕ್ರಿಯೆ ಕೊಡೋದಾಗಿ ರಷ್ಯಾ ಹೇಳಿದೆ. ಅಂದ್ಹಾಗೆ ಯುಕ್ರೇನ್‌ ಮೇಲಿನ ದಾಳಿಯಿಂದ ಈಗಾಗಲೇ ಎರಡು ದೇಶಗಳ ನಡುವೆ ಉದ್ವಿಗ್ನತೆಯಿದೆ. ಇದೀಗ ರಷ್ಯಾ ಅಧಿಕಾರಿಗಳನ್ನ ದೇಶ ಬಿಟ್ಟು ಹೋಗುವಂತೆ ಹೇಳಿರೋದು ಸಮಸ್ಯೆಯನ್ನ ಇನ್ನಷ್ಟು ತೀವ್ರಗೊಳಿಸಲಿದೆ.

-masthmagaa.com

Contact Us for Advertisement

Leave a Reply