ಅಪ್ರಾಪ್ತ ಮಕ್ಕಳಿಗೂ ದಯಾಮರಣ ನೀಡಲು ಅನುಮತಿ ಕೊಟ್ಟ ನೆದರ್ಲ್ಯಾಂಡ್ಸ್‌!

masthmagaa.com:

12 ವರ್ಷದ ಕೆಳಗಿನ ಮಕ್ಕಳಿಗೆ ದಯಾಮರಣ ನೀಡಲು ನೆದರ್ಲ್ಯಾಂಡ್ಸ್ ಸರ್ಕಾರ ಒಪ್ಪಿಗೆ ನೀಡಿದೆ. ವಾಸಿಯಾಗದ ಅಥ್ವಾ ಬದುಕುಳಿಯಲು ಯಾವುದೇ ಭರವಸೆಯಿಲ್ಲದ ಖಾಯಿಲೆಗಳಿಂದ ಬಳಲುತ್ತಿರುವ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ದಯಾಮರಣ ನೀಡಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ನೆದರ್ಲ್ಯಾಂಡ್ಸ್ ನಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳು ತಮ್ಮ ಪೋಷಕರ ಒಪ್ಪಿಗೆಯನ್ನ ಪಡೆದು ದಯಾಮರಣಕ್ಕೆ ಅರ್ಜಿ ಸಲ್ಲಿಸ್ಬೋದು. ತಮ್ಮ ಪೋಷಕರ ಒಪ್ಪಿಗೆ ಪಡೆಯೋದು ಕಡ್ಡಾಯವಾಗಿದೆ. ಆದ್ರೆ 12 ವರ್ಷದ ಕೆಳಗಿನ ಮಕ್ಕಳಿಗೆ ಈ ಅವಕಾಶ ಇರ್ಲಿಲ್ಲ. ಹೀಗಾಗಿ ಅವರಿಗೂ ದಯಾಮರಣಕ್ಕೆ ಅವಕಾಶ ನೀಡ್ಬೇಕು ಅಂತ ಅಲ್ಲಿನ ವೈದ್ಯರ ಒತ್ತಾಯದ ಮೇರೆಗೆ ಅಲ್ಲಿನ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply