ನಿಖಾ ಹಲಾಲ ಹಾಗೂ ಬಹುಪತ್ನಿತ್ವ ಅರ್ಜಿಗಳ ವಿಚಾರಣೆಗೆ ಸಾಂವಿಧಾನಿಕ ಪೀಠ ರಚನೆಗೆ ಸುಪ್ರೀಂ ಅಸ್ತು!

masthmagaa.com:

ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿರುವ ನಿಖಾ ಹಲಾಲ ಹಾಗೂ ಬಹುಪತ್ನಿತ್ವದ ಕುರಿತು ವಿಚಾರಣೆ ನಡೆಸೋಕೆ ಐವರು ನ್ಯಾಯಾಧೀಶರ ಪೀಠ ರಚಿಸೋದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. ನಿಖಾ ಹಲಾಲ ಅಂದ್ರೆ ಮೊದಲ ಪತಿಯಿಂದ ತಲಾಖ್‌ ಪಡೆದುಕೊಂಡು ಬೇರೆ ವ್ಯಕ್ತಿಯನ್ನ ಮದುವೆಯಾಗಿರೊ ಮಹಿಳೆ, ಮತ್ತೆ ತನ್ನ ಮೊದಲನೇ ಪತಿಯನ್ನ ಪುನಃ ಮದುವೆಯಾಗೋಕೆ 2ನೇ ಪತಿಗೆ ವಿಚ್ಛೇಧನ ನೀಡೋದು. ಇನ್ನು ಬಹುಪತ್ನಿತ್ವ ಪದ್ದತಿ ಅಂದ್ರೆ ನಿಮಗೆಲ್ಲಾ ಗೊತ್ತೇ ಇದೆ. ಒಬ್ಬ ವ್ಯಕ್ತಿ ಎಷ್ಟಾದ್ರೂ ಮಹಿಳೆಯರನ್ನ ಮದುವೆಯಾಗೋದು…ಇದನ್ನ ಪ್ರಶ್ನಿಸಿ ಕೆಲವೊಂದು ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಸಲ್ಲಿಕೆಯಾಗಿರೊ ಅರ್ಜಿಗಳ ವಿಚಾರಣೆಗೆ ಐವರು ನ್ಯಾಯಾಧೀಶರ ಪೀಠ ರಚಿಸೋದಾಗಿ ಈಗ ಸುಪ್ರೀಂಕೋರ್ಟ್‌ ತಿಳಿಸಿದೆ. ಅಂದ್ಹಾಗೆ ನಿಖಾ ಹಲಾಲ ಹಾಗೂ ಬಹುಪತ್ನಿತ್ವ ಪದ್ದತಿ ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಅನ್ನೋರು PIL ಸಲ್ಲಿಸಿದ್ರು. ಇದಕ್ಕೂ ಮೊದಲು ರಚಿಸಿದ್ದ ಸಾಂವಿಧಾನಿಕ ಪೀಠದ ಜಡ್ಜ್‌ಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಹೇಮಂತ್‌ ಗುಪ್ತಾ ಅವರು ನಿವೃತ್ತರಾಗಿದ್ದಾರೆ. ಹಾಗಾಗಿ ಹೊಸ ಪೀಠ ರಚಿಸುವಂತೆ ಮನವಿ ಮಾಡಿದ್ರು. ಇದಕ್ಕೆ ಮುಖ್ಯ ನ್ಯಾಯಾಧೀಶ ಡಿವೈ ಚಂದ್ರಚೂಡ್‌ ನೇತೃತ್ವದ ಪೀಠ ಒಪ್ಪಿಗೆ ನೀಡಿದೆ.

-masthmagaa.com

Contact Us for Advertisement

Leave a Reply