ChaosGPTಗೆ ಮಾನವರನ್ನ ನಾಶ ಮಾಡುವ ಟಾಸ್ಕ್!‌

masthmagaa.com:

ಇನ್ನು ಚಾಟ್‌GPT ಲಾಂಚ್‌ ಆದಾಗಿನಿಂದ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ (AI) ಆಧಾರಿತ ಚಾಟ್‌ಬಾಟ್‌ಗಳು ಇತ್ತೀಚಿನ ದಿನಗಳಲ್ಲಿ ಫುಲ್‌ ಫೇಮಸ್‌ ಆಗ್ತಿವೆ. ಆದ್ರೆ ಇದೀಗ ಓಪನ್‌AIನ GPT4ನ್ನ ಆಧಾರಿಸಿ ChaosGPTಯನ್ನ ಅಭಿವೃದ್ದಿ ಪಡಿಸಿದ್ದು, ತನ್ನದೇ ಆದ ಟ್ವಿಟರ್‌ ಅಕೌಂಟ್‌ನ್ನ ಹೊಂದಿದೆ. ಅದಕ್ಕೆ ಮಾನವ ಕುಲವನ್ನ ನಾಶ ಮಾಡುವ ಕೆಲಸವನ್ನ ನೀಡಲಾಗಿದೆ ಅಂತ ವರದಿಯಾಗಿದೆ. ಇದ್ರಿಂದ ಈ ಹೊಸ ಮಾಡಲ್‌ ಪರಮಾಣು ಶಸ್ತ್ರಗಳ ಸಂಶೋಧನೆಯಲ್ಲಿ ತೊಡಗಿದೆ ಹಾಗೂ ತನ್ನ ಕೆಲಸಕ್ಕೆ ಇತರ AI ಏಜೆಂಟ್‌ಗಳನ್ನ ನೇಮಿಸಿಕೊಳ್ತಿದೆ ಅಂತ ವರದಿಯಲ್ಲಿ ಹೇಳಲಾಗಿದೆ. ChaosGPT ಬಗ್ಗೆ ಏಪ್ರಿಲ್‌ 5 ರಂದು ವಿಡಿಯೋ ಒಂದು ಪೋಸ್ಟ್‌ ಆಗಿತ್ತು. ಅದ್ರಲ್ಲಿ ಮಾನವಕುಲದ ವಿನಾಶ, ಜಾಗತಿಕ ಪ್ರಾಬಲ್ಯ, ವಿನಾಶ ಉಂಟು ಮಾಡೋದು, ಮಾನವರ ನಿಯಂತ್ರಣ ಹಾಗೂ ಅಮರತ್ವ ಪಡೆಯುವುದು ಹೀಗೆ 5 ಗೋಲ್‌ಗಳನ್ನ ChaosGPTಗೆ ನೀಡಿರೋದು ಕಂಡುಬಂದಿದೆ.

-masthmagaa.com

Contact Us for Advertisement

Leave a Reply