ಚೀನಾ ಸರ್ವನಾಶ..ಮುಂದಿನವರ್ಷವೇ ಚೀನಾದಲ್ಲಿ 10 ಲಕ್ಷ ಜನರ ಸಾವು? ವರದಿಯಲ್ಲಿ ಸ್ಪೋಟಕ ವಿಚಾರ!

masthmagaa.com:

ಗಡಿಗಳ ಸುತ್ತಾ ತಂಟೆ ತಗೆಯುವ ಚೀನಾಗೆ ತಾನೇ ಜನ್ಮ ಕೊಟ್ಟ ಕೋರೋನಾ ಮರ್ಮಾಘಾತ ನೀಡುವ ಎಲ್ಲ ಲಕ್ಷಣಗಳು ಕೂಡ ಕಾಣಿಸ್ತಿವೆ. ಇದೀಗ ಕೋರೋನಾ ವೈರಸ್‌ಗೆ ಮುಂದಿನ ವರ್ಷವೇ ಅಂದ್ರೆ 2023ಕ್ಕೇನೇ ಒಂದಲ್ಲ ಎರಡಲ್ಲ ಸುಮಾರು 10 ಲಕ್ಷ ಜನ ಪ್ರಾಣ ಕಳೆದುಕೊಳ್ಳಲಿದ್ದಾರೆ ಅಂತ ವರದಿಯೊಂದು ಹೇಳಿದೆ. ಅಮೆರಿಕ ಮೂಲದ Health Metrics and Evaluation (IHME) ಸಂಸ್ಥೆ ನೀಡಿರುವ ಅಂಕಿ ಅಂಶಗಳ ಪ್ರಕಾರ 2023ರಲ್ಲಿ ಚೀನಾದಲ್ಲಿ ಒಂದು ಮಿಲಿಯನ್‌ಗೂ ಅಧಿಕ ಮಂದಿ ಸಾವನ್ನಪ್ಪಲಿದ್ದಾರೆ. 2023ರ ಏಪ್ರಿಲ್‌ನಲ್ಲಿ ಕೋರೋನಾ ಕೇಸ್‌ಗಳು ಆ ದೇಶದಲ್ಲಿ ಪೀಕ್‌ಗೆ ತಲುಪಲಿದೆ. ಅಂದ್ರೆ ಹಿಂದೆಂದಿಗಿಂತಲೂ ಉತ್ತುಂಗಕ್ಕೇರಲಿದೆ. ಅದೇ ಸಂಧರ್ಭಕ್ಕೆ ಅಂದ್ರೆ ಏಪ್ರಿಲ್‌ತಿಂಗಳ ವರೆಗೆ ಸುಮಾರು 3,22,000 ಜನ ಚೀನಾಒಂದರಲ್ಲೇ ಪ್ರಾಣಕಳೆದುಕೊಳ್ಳಲಿದ್ದಾರೆ. ಜೊತೆಗೆ ಚೀನಾದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟು ಮಂದಿ ಸೋಂಕಿಗೆ ತುತ್ತಾಗಲಿದ್ದಾರೆ ಅಂತ ಸಂಸ್ಥೆ ಹೇಳಿದೆ. ಕೋವಿಡ್‌ ನೀತಿಯಲ್ಲಿನ ಧಿಡೀರ್ ಸಡಿಲಿಕೆ ಹಾಗೂ ಚೀನಾದ ಪರಿಣಾಮಕಾರಿಯಲ್ಲದ ಕೋವಿಡ್‌ ಲಸಿಕೆಗಳೇ ಇದಕ್ಕೆ ಕಾರಣ ಅಂತ ಹೇಳಲಾಗಿದೆ. ಇತ್ತ ಈ ವರದಿಗೆ ಪುಷ್ಠಿ ಕೊಡುವಂತೆ ಚೀನಾ ಸರ್ಕಾರ ಡಿಸೆಂಬರ್‌ 3ರಿಂದ ಅಂದ್ರೆ ಚೀನಾದಲ್ಲಿ ಕೊವಿಡ್‌ ನಿಯಮಗಳನ್ನ ಸಡಿಲ ಮಾಡಿದಾಗಿನಿಂದ ಕೊರೊನಾ ಸಾವಿನ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಇದು ಸಾವಿನ ಕುರಿತ ಅನುಮಾನಕ್ಕೆ ಮತ್ತಷ್ಟು ಕಾರಣವಾಗಿದೆ. ಅಂದ್ಹಾಗೆ ವಿಶ್ವದಲ್ಲೇ ಅತ್ಯಂತ ಕಠಿಣ ಲಾಕ್‌ಡೌನ್‌ ಹೇರಿದ್ದ ಚೀನಾದಲ್ಲಿ ಒಂದು ಕೇಸ್‌ ಬಂದ್ರೂ ಇಡೀ ನಗರವನ್ನೇ ಸೀಲ್‌ ಮಾಡುತ್ತಿದ್ದರು. ಆದ್ರೆ ಈಗ ಚೀನಾದಲ್ಲಿ ದಿನಕ್ಕೆ ಸಾವಿರಾರು ಕೇಸ್‌ಗಳು ವರದಿಯಾಗ್ತಿವೆ. ಈಗಂತೂ ಇದು ಲಕ್ಷ ತಲುಪಿದ್ರೂ ಆಶ್ಚರ್ಯ ಇಲ್ಲ ಅಂತ ಕೂಡ ಹೇಳಲಾಗ್ತಿದೆ. ಇದೀಗ ಈ ವರದಿಯ ಅಂಕಿಅಂಶ ನೋಡಿದ್ರೆ ಚೀನಾದಲ್ಲಿ ಮುಂದೆ ಅಲ್ಲೋಲ ಕಲ್ಲೋಲವೇ ಸೃಷ್ಠಿಯಾಗೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ.ಯಾಕಂದ್ರೆ, ಈಗಾಗಲೇ ಒಂದ್ಕಡೆ ಕೊವಿಡ್‌ ನಿಯಮಗಳನ್ನ ವಿರೋಧಿಸಿ ಅಲ್ಲಿನ ಜನರೇ ದಿ ಟೈಟ್‌ ಕಮ್ಯುನಿಸ್ಟ್‌ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸ್ತಿದಾರೆ. ಇನ್ನೊಂದ್ಕಡೆ ಅದೇ ಕಠಿಣ ರೂಲ್ಸ್‌ಗೆ ಬೇಸತ್ತು ಅಲ್ಲಿದ್ದ ಜಾಗತಿಕ ದೊಡ್ಡ ಕಂಪನಿಗಳು ಬಾಗಿಲು ಹಾಕೊಂಡು ಭಾರತದಂತಹ ದೇಶಗಳನ್ನ ನೋಡ್ತಾಯಿವೆ. ಈಗಾಗಲೇ ಚೀನಾದ ಆರ್ಥಿಕತೆ ಹಳ್ಳ ಹಿಡಿಯೋಕೆ ಶುರುವಾಗಿದೆ. ಅದರ ಜೊತೆಗೆ ಕೋರೋನಾ ಸ್ಪೋಟವಾಗಿ, ದುಡಿಯೋ ಜನರೆಲ್ಲಾ ಆಸ್ಪತ್ರೆಗೆ ಸೇರೋದು ಜಾಸ್ತಿಯಾಗಿ, ಈಗ ಹೇಳಿರೋ ರೀತಿಯಲ್ಲಿ ಸಾವು ಕೂಡ ಆದ್ರೆ ಚೀನಾದ ಆರ್ಥಿಕತೆ ಊಹಿಸೋಕೆ ಸಾಧ್ಯವಾಗದ ರೀತಿಯಲ್ಲಿ ಪಾತಾಳಕ್ಕೆ ಇಳಿಯಲಿದೆ ಅಂತ ತಜ್ಞರು ವಿಶ್ಲೇಷಣೆ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಇದು ಜಗತ್ತಿನ ಮೇಲೂ ಅತಿದೊಡ್ಡ ಪರಿಣಾಮ ಬೀರಲಿದೆ. ಯಾಕಂದ್ರೆ ಇಡೀ ವಿಶ್ವದ ಕೈಗಾರಿಕೆ, ಉತ್ಪಾದನೆಯ ಹಬ್‌ ಅಂತ ಕರೆಸಿಕೊಂಡಿರೋ ಚೀನಾದಲ್ಲಿ ಎಲ್ಲ ವಹಿವಾಟು, ಕೈಗಾರಿಕೆಗಳು, ಉತ್ಪಾದನೆಗಳು ನಿಂತುಹೋದ್ರೆ ಭಾರತವೂ ಸೇರಿದಂತೆ ಚೀನಾದ ವಸ್ತುಗಳ ಮೇಲೆ ಡಿಪೆಂಡ್‌ ಆಗಿರೋ ಜಗತ್ತಿನ ಎಲ್ಲ ದೇಶದ ಆರ್ಥಿಕತೆಯೂ ಸಮಸ್ಯೆಗೆ ಈಡಾಗಲಿದೆ. ಒಟ್ನಲ್ಲಿ ಚೀನಾಗೆ ಸರ್ವನಾಶ ಸನ್ನಿಹಿತದಲ್ಲಿದೆ ಅಂತ ಹೇಳಲಾಗ್ತಿದ್ದು, ಜಗತ್ತು ಸಹ ಇದರ ಪರಿಣಾಮ ಅನುಭವಿಸಬೇಕಾಗಿ ಬರಬೋದು ಅಂತ ಆಂತಕ ವ್ಯಕ್ತವಾಗ್ತಿದೆ.

-masthmagaa.com

Contact Us for Advertisement

Leave a Reply