ಪಾಕಿಸ್ತಾನದ ಸಚಿವನ ಹೇಳಿಕೆಗೆ ಭಾರತ ತಕ್ಕ ಪ್ರತ್ಯುತ್ತರ!

masthmagaa.com:

ಪ್ರಧಾನಿ ಮೋದಿಯನ್ನ ಕಟುಕ ಅಂತ ಕರೆದಿರೋ ಪಾಕ್‌ ಸಚಿವ ಬಿಲಾವಲ್‌ ಭುಟ್ಟೋ ಜರ್ಧಾರಿಗೆ ಭಾರತ ತೀಕ್ಷ್ಮ ಪ್ರತಿಕ್ರಿಯೆ ಕೊಟ್ಟಿದೆ. ಪಾಕಿಸ್ತಾನ ಈ ಹೇಳಿಕೆ ಕೊಟ್ಟು ಮತ್ತಷ್ಟು ಕೀಳು ಮಟ್ಟಕ್ಕೆ ಇಳಿದಿದೆ. ಪಾಕಿಸ್ತಾನದ ವಿದೇಶಾಂಗ ಸಚಿವರು 1971 ರ ಈ ದಿನವನ್ನು ಮರೆತಿದ್ದಾರೆ, (ಅಂದ್ರೆ ಭಾರತದ ವಿರುದ್ದ ಸೋಲಿನ ಪತ್ರಕ್ಕೆ ಸಹಿ ಹಾಕಿದ ದಿನ.. ವಿಜಯ್‌ ದಿವಸ್‌) ಇದು ಪಾಕಿಸ್ತಾನಿ ಆಡಳಿತಗಾರರು ಬಂಗಾಳಿಗಳು ಮತ್ತು ಹಿಂದೂಗಳ ವಿರುದ್ಧ ನಡೆಸಿದ ನರಮೇಧದ ಪರಿಣಾಮ. ದುರದೃಷ್ಟವಶಾತ್, ಪಾಕಿಸ್ತಾನ ಅಲ್ಪಸಂಖ್ಯಾತರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುವ ರೀತಿ ಇನ್ನೂ ಕಾಣಿಸ್ತಿಲ್ಲ ಅಂತ ಭಾರತದ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಅಂದ್ಹಾಗೆ ಬಿನ್‌ ಲಾಡೆನ್‌ಗೆ ಆಶ್ರಯ ಕೊಟ್ಟ ದೇಶ ಭಯೋತ್ಪಾದನೆ ವಿರುದ್ದ ಮಾತನಾಡೋ ಹಕ್ಕು ಹೊಂದಿಲ್ಲ ಅಂತ ವಿಶ್ವಸಂಸ್ಥೆಯಲ್ಲಿ ಜೈ ಶಂಕರ್‌ ಪಾಕ್‌ ವಿರುದ್ದ ಹೇಳಿಕೆ ಕೊಟ್ಟಿದ್ರು. ಅದಕ್ಕೆ ವೈಯಕ್ತಿಕ ಹಂತದಲ್ಲಿ ಮೋದಿ ವಿರುದ್ದ ಹೇಳಿಕೆ ಕೊಟ್ಟಿದ್ದ ಪಾಕ್‌ ಸಚಿವ, ಬಿನ್‌ ಲಾಡೆನ್‌ ಸತ್ತೋಗಿದ್ದಾನೆ. ಆದ್ರೆ ಗುಜರಾತ್‌ನ ಕಟುಕ ಇನ್ನೂ ಬದುಕಿದ್ದಾರೆ..ಭಾರತದ ಪ್ರಧಾನಿ ಕೂಡ ಆಗಿದಾರೆ ಅಂತ ಹೇಳಿದ್ರು. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಭಾರತದಲ್ಲಿರುವ ಪಾಕ್‌ ಹೈ ಕಮೀಷನ್‌ ಕಚೇರಿಯ ಎದರು ಈಗಾಗಲೇ ಬಿಜೆಪಿ ಪ್ರತಿಭಟನೆ ಕೂಡ ನಡೆಸಲಾಗಿದೆ. ನಾಳೆ ಕೂಡ ದೇಶಾದ್ಯಂತ ಪ್ರತಿಭಟನೆ ಮಾಡೋಕೆ ಬಿಜೆಪಿ ಸಜ್ಜಾಗಿದೆ ಅನ್ನೋ ಮಾಹಿತಿಗಳು ಬರ್ತಾಯಿವೆ.

-masthmagaa.com

Contact Us for Advertisement

Leave a Reply