ನೇಪಾಳದ ನೋಟಿನಲ್ಲಿ ಭಾರತದ ಪ್ರದೇಶಗಳನ್ನೊಳಗೊಂಡ ಮ್ಯಾಪ್‌!

masthmagaa.com:

ʻರೋಟಿ-ಬೇಟಿʼ ಮಿತ್ರರಾಷ್ಟ್ರ ಅಂತ ತಲೆ ಮೇಲೆ ಕೂರಿಸಿಕೊಂಡಿದ್ಕೋ ಏನೋ ನೇಪಾಳ ಮತ್ತೆ ಬಾಲಬಿಚ್ಚಿದೆ. ಭಾರತದ ಮೂರು ಪ್ರದೇಶಗಳನ್ನ ಈಗ ತನ್ನ ಜಾಗ ಅನ್ನೋ ರೀತಿಯಲ್ಲಿ ನೇಪಾಳದ ಹೊಸ 100 ರೂಪಾಯಿ ನೋಟಲ್ಲಿ ಪ್ರಿಂಟ್‌ ಮಾಡೋಕೆ ಮುಂದಾಗಿದೆ. ಉತ್ತರಾಖಂಡದ ಲಿಪುಲೇಖ್‌, ಲಿಂಪಿಯಧುರ ಹಾಗೂ ಕಾಲಾಪಾನಿ ಪ್ರದೇಶಗಳನ್ನ ಒಳಗೊಂಡಿರೋ ನೇಪಾಳದ ಮ್ಯಾಪ್‌ನ್ನ ತನ್ನ 100 ರೂ ನೋಟಿನಲ್ಲಿ ಪ್ರಿಂಟ್‌ ಮಾಡೋದಾಗಿ ಮೇ 03ರಂದು ನೇಪಾಳ ಅನೌನ್ಸ್‌ ಮಾಡಿದೆ. ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್‌ ಅಧ್ಯಕ್ಷತೆಯ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂದ್ಹಾಗೆ 2020ರ ಜೂನ್‌ 18ರಂದೇ ನೇಪಾಳ ಈ ಕಿತಾಪತಿ ಮಾಡಿತ್ತು. ಈ ಮೂರು ಸ್ಟ್ರಟಜಿಕ್‌ ಪ್ಲೇಸ್‌ಗಳನ್ನ ಸೇರಿಸ್ಕೊಂಡು ಹೊಸ ಮ್ಯಾಪ್‌ ಬಿಡುಗಡೆ ಮಾಡಿತ್ತು. ಆವಾಗ್ಲೇ ಭಾರತ ನೇಪಾಳದ ಈ ನಡೆಯನ್ನ ತೀವ್ರವಾಗಿ ಖಂಡಿಸಿ, ʻಅಸಮರ್ಥನೀಯʼ ಅಂತ ಕರೆದು, ಅಕ್ರಮವಾಗಿ ನಿಮ್ಮ ಪ್ರದೇಶವನ್ನ ಹೆಚ್ಚು ಮಾಡಿದ್ದೀರಿ ಅಂತ ಹೇಳಿತ್ತು. ಭಾರತ-ನೇಪಾಳದ ನಡುವೆ ಓಪನ್‌ ಬಾರ್ಡರ್‌ಗಳು ಇದೆಯಾದ್ರು ಈ ಜಾಗಗಳಿಗೆ ಸಂಬಂಧಿಸಿದಂತೆ ವಿವಾದ ಇದೆ. ಲಿಪುಲೇಖ್‌, ಲಿಂಪಿಯಧುರ ಹಾಗೂ ಕಾಲಾಪಾನಿ ಸ್ಟ್ರಟಜಿಕಲಿ ತುಂಬಾ ಮಹತ್ವದ ಜಾಗಗಳು. ಯಾಕಂದ್ರೆ ಇವ್ರು ಭಾರತ, ಚೀನಾ ಮತ್ತು ನೇಪಾಳ ಸೇರುವ ಟ್ರೈಜಂಕ್ಷನ್‌. 20 ಸಾವಿರ ಅಡಿ ಎತ್ತರದಲ್ಲಿರೋದ್ರಿಂದ ಕಾಲಾಪಾನಿಯಿಂದ ನಾವು ಚೀನಾದ ಚಟುವಟಿಕೆಗಳ ಮೇಲೆ ನಿಗಾ ಇಡ್ಬಹುದು. 1816ರಲ್ಲಿ ರಾಜ ಮಹೇಂದ್ರ ಮತ್ತು ಬ್ರಿಟಿಷ್‌ ಇಂಡಿಯಾ ನಡುವಿನ ಸುಗೌಲಿ ಒಪ್ಪಂದದ ಪ್ರಕಾರ ಕಾಳಿ ನದಿ ಅಥವಾ ಸರಯೂ ನದಿ ಭಾರತ ಮತ್ತು ನೇಪಾಳದ ನಡುವೆ ಬಾರ್ಡರ್‌ ಆಗುತ್ತೆ. ಆದ್ರೆ ಈ ನದಿ ಉಗಮ ಹರಿವಿಕೆ ಬಗ್ಗೆ ಸ್ಪಷ್ಟತೆ ಇಲ್ಲದಿರೋದ್ರಿಂದ ಗಡಿ ವಿಚಾರದಲ್ಲಿ ಗಲಾಟೆ ಇದೆ.

-masthmagaa.com

Contact Us for Advertisement

Leave a Reply