ಹವಾನಾ ಸಿಂಡ್ರೋಮ್‌ ಬಗ್ಗೆ ಹೊಸ ರಿಪೋರ್ಟ್‌! ರಷ್ಯಾ ಮೇಲೆ ಆರೋಪ!

masthmagaa.com:

ಅತ್ಯಂತ ನಿಗೂಢವೆನಿಸೋ ಹವಾನಾ ಸಿಂಡ್ರೋಮ್‌ ಅನ್ನೋ ಮಾನಸಿಕ ರೋಗಲಕ್ಷಣ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದು ಭಾರಿ ಸದ್ದು ಮಾಡ್ತಿದೆ. ಈ ಸಿಂಡ್ರೋಮ್‌ಗೆ ರಷ್ಯಾನೇ ಪ್ರಮುಖ ಕಾರಣ… ಸೋನಾರ್‌ ವೆಪನ್‌ಗಳನ್ನ ಬಳಸಿ ರಷ್ಯಾ ಹವಾನಾ ಸಿಂಡ್ರೋಮ್‌ ಹುಟ್ಟುಹಾಕಿದೆ ಅಂತ ಹೊಸ ರಿಸರ್ಚ್‌ ಒಂದು ಹೇಳಿದೆ. The Insider ಅನ್ನೋ ದಿನಪತ್ರಿಕೆ Der Spiegel ಮತ್ತು 60 Minutes ಅನ್ನೋ ಮ್ಯಾಗಜೀನ್‌ಗಳ ಸಹಯೋಗದೊಂದಿಗೆ ಹವಾನಾ ಸಿಂಡ್ರೋಮ್‌ ಬಗ್ಗೆ ತನಿಖೆ ನಡೆಸಿ, ಹೊಸ ರಿಪೋರ್ಟ್‌ ರಿಲೀಸ್‌ ಮಾಡಿದೆ. 2016ರ ವೇಳೆ ಮೊದಲ ಬಾರಿಗೆ ಕ್ಯೂಬಾದಲ್ಲಿ 20ಕ್ಕೂ ಹೆಚ್ಚು ಅಮೆರಿಕ ಮತ್ತು ಕೆನಡಾ ರಾಜತಾಂತ್ರಿಕರಲ್ಲಿ ಈ ಸಿಂಡ್ರೋಮ್‌ ಕಾಣಿಸಿಕೊಂಡಿತ್ತು. ಯಾವ್ದೇ ರೀತಿ ಶಬ್ದ ಇಲ್ಲದಿದ್ರು ಇವ್ರಿಗೆ ಮಾತ್ರ ಕಿವಿ ಕೊರೆಯುವಂತಹ ಶಬ್ದಗಳು ಕೇಳಿದಂತಾಗೋದು, ಜ್ಞಾಪಕ ಶಕ್ತಿ ಕಡಿಮೆಯಾಗೋದು, ಮೈಗ್ರೇನ್‌, ವಾಕರಿಕೆ, ತಲೆತಿರುಗುವಿಕೆಯಂತಹ ರೋಗಲಕ್ಷಣಗಳನ್ನ ಈ ರಾಜತಾಂತ್ರಿಕರು ಅನುಭವಿಸಿದ್ರು. ಮೊದಲು ಕ್ಯೂಬಾದ ರಾಜಧಾನಿ ಹವಾನಾದಲ್ಲಿ ಈ ಪ್ರಕರಣ ಕಾಣಿಸ್ಕೊಂಡಿದ್ರಿಂದ ಇದಕ್ಕೆ ಹವಾನಾ ಸಿಂಡ್ರೋಮ್‌ ಅಂತ ಹೆಸರು ಇಡಲಾಯ್ತು. ಇದ್ರಿಂದ ಅಮೆರಿಕ ಮತ್ತು ಕ್ಯೂಬಾ ಸಂಬಂಧದಲ್ಲಿ ಸ್ವಲ್ಪ ಮನಸ್ಥಾಪಗಳು ಕೂಡ ಉಂಟಾದ್ವು. ನಂತ್ರ ಚೀನಾ, ಕೆನಡಾ ಸೇರಿದಂತೆ ವಿಶ್ವಾದ್ಯಂತ ನೂರಾರು ಅಮೆರಿಕದ ರಾಯಭಾರಿ ಸಿಬ್ಬಂಧಿಗಳಲ್ಲಿ ಹಾಗು ಅವ್ರ ಕುಟುಂಬದವರಲ್ಲಿ ಇದು ಕಾಣಿಸಿಕೊಂಡಿತ್ತು. ಇದೀಗ ಈ ಸಿಂಡ್ರೋಮ್‌ ಬಗ್ಗೆ ಹೊಸ ತನಿಖೆ ನಡೆಸಲಾಗಿದ್ದು…ಇದಕ್ಕೆ ರಷ್ಯಾ ಕಾರಣ ಅಂತ ಆರೋಪಿಸಲಾಗಿದೆ. ರಷ್ಯಾದ ಗುಪ್ತಚರ ದಾಖಲೆಗಳು, ಟ್ರಾವೆಲ್‌ ರೆಕಾರ್ಡ್ಸ್‌, ಫೋನ್‌ ಕಾಲ್‌ಗಳ ಡೇಟಾ ಮತ್ತು ಕೆಲ ಸ್ಟೇಟ್‌ಮೆಂಟ್‌ಗಳ ಆಧಾರದ ಮೇಲೆ ರಷ್ಯಾದ ಮೇಲೆ ನೇರಾನೇರ ಆರೋಪ ಮಾಡಲಾಗಿದೆ. ಇನ್ನು ಈ ರಿಪೋರ್ಟ್‌ ಹೊರ ಬೀಳ್ತಿದ್ಹಾಗೆ, ಅಮೆರಿಕದ ಸಂಸದರೊಬ್ರು, ರಷ್ಯಾ ಜೊತೆ ಕ್ಯೂಬಾ ಸರ್ಕಾರವನ್ನೂ ದೂಷಿಸಿದ್ದಾರೆ. ರಷ್ಯಾ ಮತ್ತು ಕ್ಯೂಬಾ ಒಟ್ಟಿಗೆ ಸೇರಿ ಈ ಕೆಲಸ ಮಾಡಿದೆ ಅಂತ ಆರೋಪಿಸಿದ್ದಾರೆ. ಆದ್ರೆ ಈ ಎಲ್ಲಾ ಆರೋಪಗಳನ್ನ ಕ್ಯೂಬಾ ಮತ್ತು ರಷ್ಯಾ ನಿರಾಕರಿಸಿ….ನಾವು ಮಾಡಿಲ್ಲ ಅಂತೇಳಿದೆ. ಅಂದ್ಹಾಗೆ ಈ ಸಿಂಡ್ರೋಮ್‌ ಸಂಬಂಧ ರಷ್ಯಾ ಮೇಲೆ ಅಪವಾದ ಹೇರಿರೋದು ಇದೇನು ಮೊದಲಲ್ಲ. ಈ ಹಿಂದೆ ಅಮೆರಿಕದ `The New York Times’ ಕೂಡ ಇದೇ ರೀತಿ ಆರೋಪ ಮಾಡಿತ್ತು.

-masthmagaa.com

Contact Us for Advertisement

Leave a Reply