ಹೊಸ ಟೆಲಿಕಾಂ ಬಿಲ್‌! ಟೆಲಿಕಾಂ ಕಂಪನಿಗಳ ಮೇಲೆ ಕೇಂದ್ರದ ಹಿಡಿತ!

masthmagaa.com:

ಹೊಸತಾಗಿ ಡಿಸೆಂಬರ್‌ 18 ರಂದು ಟೆಲಿಕಮ್ಯುನಿಕೇಷನ್‌ ಬಿಲ್‌ 2023 ಲೋಕಸಭೆಯಲ್ಲಿ ಮಂಡಿಸಲಾಯ್ತು. ಈ ಮೂಲಕ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಿಂದ ಎಲ್ಲಾ ರೀತಿಯ ಟೆಲಿಕಮ್ಯುನಿಕೇಷನ್‌ ಸರ್ವೀಸಸ್‌ ಅಥ್ವಾ ನೆಟ್ವರ್ಕ್‌ಗಳ ಕಂಟ್ರೋಲ್‌, ಮ್ಯಾನೇಜ್‌ ಮತ್ತು ನಿಲ್ಲಿಸೋ ಶಕ್ತಿ ಸರ್ಕಾರಕ್ಕೆ ನೀಡಲಾಗುತ್ತೆ. ಈ ಬಿಲ್‌ 138 ವರ್ಷಗಳ ಹಳೆಯ ಭಾರತೀಯ ಟೆಲಿಗ್ರಾಫ್‌ ಕಾಯಿದೆಯನ್ನ ರಿಪ್ಲೇಸ್‌ ಮಾಡುತ್ತೆ ಎನ್ನಲಾಗಿದೆ. ಅಂದ್ಹಾಗೆ ಈ ನೂತನ ಬಿಲ್‌ಗೆ ಕ್ಯಾಬಿನೆಟ್‌ ಕಡೆಯಿಂದೆ ಈ ಹಿಂದೆ ಆಗಸ್ಟ್‌ ತಿಂಗಳಲ್ಲೇ ಒಪ್ಪಿಗೆ ಸಿಕ್ಕಿತ್ತು. ಇದೀಗ ಲೋಕಸಭೆಯಲ್ಲಿ ಈ ಬಿಲ್‌ನ್ನ ಮಂಡಿಸಲಾಗಿದೆ. ಈ ಬಿಲ್‌ ಪ್ರಕಾರ, OTT ಅಥ್ವಾ ಇಂಟರ್‌ನೆಟ್‌ ಆಧಾರಿತ ಕಾಲ್‌ ಮತ್ತು ಮೆಸೇಜಿಂಗ್‌ ಆ್ಯಪ್‌ಗಳನ್ನ ಟೆಲಿಕಮ್ಯುನಿಕೇಷನ್‌ ಅಡಿಯಲ್ಲಿ ತರಲಾಗುತ್ತೆ. ಯಾಕಂದ್ರೆ ಬಳಕೆದಾರರ ಸೇಫ್ಟಿಯನ್ನ ಹೆಚ್ಚಿಸೋಕೆ ಈ ರೀತಿ ಮಾಡಲಾಗುತ್ತೆ. ಜೊತೆಗೆ ಟೆಲಿಕಾಮ್‌ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾದ (Trai) ಪವರ್‌ನ್ನ ನಿರ್ಬಂಧಿಸೋಕೆ ಈ ಬಿಲ್‌ ಪ್ರಸ್ತಾಪಿಸಲಾಗಿದೆ. TRAI ಅಧಿಕಾರ ವ್ಯಾಪ್ತಿಯ ಬಗ್ಗೆ ಕೆಲವು ಟೆಲಿಕಾಮ್ ಉದ್ಯಮಿಗಳು‌ ಕಳವಳ ವ್ಯಕ್ತಪಡಿಸಿದ್ರು ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply