ಅಮೆರಿಕ: 300 ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರ ಬಂಧನ!

masthmagaa.com:

ಅಮೆರಿಕದ ಯುನಿವರ್ಸಿಟಿಗಳಲ್ಲಿ ಇಸ್ರೇಲ್‌ ವಿರುದ್ಧ ಪ್ಯಾಲೆಸ್ತೀನ್‌ ಬೆಂಬಲಿಗರ ಪ್ರತಿಭಟನೆ ಜಾಸ್ತಿಯಾಗಿದೆ. ಇದೀಗ ಅಲ್ಲಿನ ಕೊಲಂಬಿಯಾ ಯುನಿವರ್ಸಿಟಿ ಮತ್ತು ಸಿಟಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಸುಮಾರು ನೂರಾರು ಪ್ರತಿಭಟನಾಕಾರರ ಮೇಲೆ ಅಮೆರಿಕ ಪೊಲೀಸರು ದೌರ್ಜನ್ಯ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ 300ಕ್ಕೂ ಅಧಿಕ ಪ್ರತಿಭಟನಾಕಾರರನ್ನ ಅರೆಸ್ಟ್‌ ಮಾಡಲಾಗಿದೆ. ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಸುಮಾರು 109 ಮಂದಿ ಅರೆಸ್ಟ್‌ ಆದ್ರೆ, ಸಿಟಿ ಕಾಲೇಜಿನಲ್ಲಿ ಸುಮಾರು 173 ಮಂದಿ ಅರೆಸ್ಟ್‌ ಆಗಿದ್ದಾರೆ.

-masthmagaa.com

Contact Us for Advertisement

Leave a Reply