ಅಮೆರಿಕದ ಇಲಿಗಳಲ್ಲಿ ಕೊರೊನಾ ವೈರಸ್‌ ಪತ್ತೆ! ತಜ್ಞರು ಹೇಳಿದ್ದೇನು?

masthmagaa.com:

ಕೊರೊನಾ ಪ್ಯಾಂಡಮಿಕ್‌ ಮುಗಿದು ಜಗತ್ತು ಚೇತರಿಸಿಕೊಳ್ತಿರೊ ಹೊತ್ತಲ್ಲಿ ಕೊರೊನಾ ವೈರಸ್‌ ಕುರಿತು ಮತ್ತೊಂದು ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಅಮೆರಿಕದ ನ್ಯೂಯಾರ್ಕ್‌ ನಗರದ ಇಲಿಗಳು ಕೋವಿಡ್-19‌ ವೈರಸ್‌ನಿಂದ ಇನ್‌ಫೆಕ್ಟ್‌ ಆಗಿ, ವೈರಸ್‌ನ್ನ ಕ್ಯಾರಿ ಮಾಡ್ತಿವೆ ಅಂತ ಹೊಸ ಅಧ್ಯಯನದಲ್ಲಿ ತಿಳಿದು ಬಂದಿದೆ. ಅಲ್ದೇ ನ್ಯೂಯಾರ್ಕ್‌ ನಗರ ಸುಮಾರು 80 ಲಕ್ಷ ಇಲಿಗಳನ್ನ ಹೊಂದಿದ್ದು, ಆಘಾತಕಾರಿಯಾಗಿದೆ ಅಂತ ಸಂಶೋಧನಕಾರರು ತಿಳಿಸಿದ್ದಾರೆ. mBio ಅನ್ನೊ ಜರ್ನಲ್‌ನಲ್ಲಿ ಈ ವರದಿಯನ್ನ ಪಬ್ಲಿಶ್‌ ಮಾಡಲಾಗಿದೆ. ನ್ಯೂಯಾರ್ಕ್‌ ಇಲಿಗಳ ಸ್ಯಾಂಪಲ್‌ಗಳನ್ನ ಟೆಸ್ಟ್‌ ಮಾಡಿದಾಗ ಕೊರೊನಾ ವೈರಸ್‌ನ ಮೂರು ತಳಿಗಳಾದ ಅಲ್ಫಾ, ಡೆಲ್ಟಾ ಹಾಗೂ ಒಮೈಕ್ರಾನ್‌ ರೂಪಾಂತರಿಗಳ ಸೋಂಕು ಪತ್ತೆಯಾಗಿದೆ. ಒಟ್ಟು 79 ಇಲಿಗಳನ್ನ ಪರೀಕ್ಷೆಗೆ ಒಳಪಡಿಸಿದ್ದು, ಅದ್ರಲ್ಲಿ 13 ಇಲಿಗಳಲ್ಲಿ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ರೇಟ್‌ 16.5% ಇದೆ ಎನ್ನಲಾಗಿದೆ. ಇನ್ನು ಈ ಇಲಿಗಳು ವೇಸ್ಟ್‌ ವಾಟರ್‌ ಸಿಸ್ಟಮ್‌ಗಳ ಅಕ್ಕಪಕ್ಕದ ಲೊಕೇಶನ್‌ಗಳಲ್ಲಿ ಕಂಡುಬಂದಿವೆ. ಮಾನವರ ಆರೋಗ್ಯಕ್ಕೆ ಕುತ್ತು ತರುವ ಈ ಇಲಿಗಳು ಹೇಗೆ ಸೋಂಕಿಗೆ ಒಳಗಾದವು ಅನ್ನೊದು ಇನ್ನ ಕ್ಲಿಯರ್‌ ಆಗಿಲ್ಲ ಅಂತ ತಜ್ಞರು ಹೇಳಿದ್ದಾರೆ. ಅಲ್ದೇ ಪ್ರಾಣಿಗಳಲ್ಲಿ ಹರಡ್ತಿರೊ ಈ ವೈರಸ್‌ ಮತ್ತೆ ಹೊಸ ರೂಪಾಂತರಿಗಳನ್ನ ಸೃಷ್ಟಿ ಮಾಡಿ ಮನುಷ್ಯರಿಗೆ ಅಪಾಯ ಉಂಟುಮಾಡಬಹುದು. ಹೀಗಾಗಿ ನಾವು ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಾಗಿದೆ ಅಂತ ತಜ್ಞರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply