ಖಲಿಸ್ತಾನಿ ಉಗ್ರರಿಗಾಗಿ ಶೋಧ: ಪಂಜಾಬ್, ಹರ್ಯಾಣದಲ್ಲಿ NIA ದಾಳಿ!

masthmagaa.com:

ಸ್ಯಾನ್‌ ಫ್ರಾನ್ಸಿಸ್ಕೋದ ಭಾರತೀಯ ರಾಯಭಾರಿ ಕಚೇರಿ ಮೇಲಿನ ಖಲಿಸ್ತಾನಿ ಉಗ್ರರ ಗಲಭೆ ಈಗ ಮತ್ತೇ ಮುನ್ನಲೆಗೆ ಬಂದಿದೆ. ಈ ಬಗ್ಗೆ NIA ತನಿಖೆಗಾಗಿ ಇಂದು ಪಂಜಾಬ್‌ನ ಜಲಂಧರ್‌, ಮೊಗಾ,ಲೂಧಿಯಾನಾ, ಗುರುದಾಸಪುರ್,‌ ಮೊಹಾಲಿ,ಪಟಿಯಾಲಾ ಮತ್ತು ಹರ್ಯಾಣಾದ ಕುರುಕ್ಷೇತ್ರ, ಯಮುನಾನಗರ ಸೇರಿದಂತೆ ಒಟ್ಟು 14 ಕಡೆಗಳಲ್ಲಿ ದಾಳಿ ನಡೆಸಿದೆ. ಖಲಿಸ್ತಾನಿ ಧಂಗೆಕೋರರನ್ನ ಪತ್ತೆ ಹಚ್ಚೋಕೆ NIA ಈ ದಾಳಿ ನಡೆಸಿದ್ದು, ಭಾರತದ ವಿರೋಧಿ ಟೀ‌ಮ್‌ಗಳಿಗೆ ಈ ಮೂಲಕ ಸ್ಟ್ರಾಂಗ್‌ ಮೇಸೇಜ್‌ ಪಾಸ್‌ ಮಾಡಿದೆ. ಈ ಹಿಂದೆ ಮಾರ್ಚ್19‌, ಜುಲೈ 2ರಂದು ಸ್ಯಾನ್‌ ಫ್ರಾನ್ಸಿಸ್ಕೋದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಖಲಿಸ್ತಾನಿ ಉಗ್ರರು ಸಾರ್ವಜನಿಕ ಆಸ್ತಿ ಹಾನಿ ಮತ್ತು ಖಲಿಸ್ತಾನಿ ಧ್ವಜ ಹಾರಿಸಿ ಕಚೇರಿಯ ತಾತ್ಕಾಲಿಕ ತಡೆಗೋಡೆ ಕೆಡವಿ ಖಲಿಸ್ತಾನದ ಪರ ಘೋಷಣೆ ಕೂಗಿ ಪುಂಡಾಟಿಕೆ ಮೆರೆದಿದ್ದರು. ಘಟನೆಗೆ ಸಂಬಂಧಿಸಿದಂತೆ NIA ಆಗಸ್ಟ್‌ನಲ್ಲಿ ಸ್ಯಾನ್‌ ಫ್ರಾನ್ಸಿಸ್ಕೋಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಕಲೆಹಾಕಿತ್ತು.

-masthmagaa.com

Contact Us for Advertisement

Leave a Reply