ದೇಶಾದ್ಯಂತ NIA ದಾಳಿ: ಬೆಂಗಳೂರಿನಲ್ಲಿ ಸೋಡಿಯಂ ನೈಟ್ರೇಟ್‌ ಪತ್ತೆ!

masthmagaa.com:

ಉಗ್ರರಿಗೆ ಬಲೆ ಬೀಸಿರೋ NIA ದೇಶಾದ್ಯಂತ 41 ಕಡೆಗಳಲ್ಲಿ ದಾಳಿ ನಡೆಸಿದೆ. ಈ ದಾಳಿ ವೇಳೆ ರಾಜ್ಯ ರಾಜಧಾನಿಯಲ್ಲಿ ಸ್ಫೋಟಕ ತಯಾರಿಸೋಕೆ ಬಳಸಲಾಗೋ ಕೆಮಿಕಲ್‌ನ್ನ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿಯ ಬಾಡಿಗೆ ಮನೆಯೊಂದ್ರ ಮೇಲೆ ದಾಳಿ ನಡೆಸಿದಾಗ ಸ್ಫೋಟಕ ತಯಾರಿಕೆಗೆ ಬಳಸಲಾಗೋ 7 ಕೆಜಿ ಸೋಡಿಯಂ ನೈಟ್ರೇಟ್‌ ಅನ್ನೋ ಕೆಮಿಕಲ್ ಪತ್ತೆಯಾಗಿದೆ. ಹೀಗಾಗಿ ಈ ಮನೆಯಲ್ಲಿ ವಾಸವಾಗಿದ್ದ ಶಮೀವುಲ್ಲಾ ಸೂಫಿಯಾನ್‌ ಆಗಿ ಮತಾಂತರಗೊಂಡಿದ್ದ ನಿಖಿಲ್‌ ಅನ್ನೋ ವ್ಯಕ್ತಿಯನ್ನ ಅಧಿಕಾರಿಗಳು ಅರೆಸ್ಟ್‌ ಮಾಡಿದ್ದಾರೆ. ಈತನ ಜೊತೆಗೆ ನಿಷೇಧಿತ ‌PFI ಸಂಘಟನೆಯ ಬಳ್ಳಾರಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುಲೇಮಾನ್‌, ಮುಜಾಮಿಲ್‌, ತಬ್ರೇಜ್‌ ಮತ್ತು ಅಜಾಜ್‌ ಅಹ್ಮದ್‌ ಅನ್ನೋರನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನು ಬೆಂಗಳೂರಿನ 20ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿರೋ NIA ಅಧಿಕಾರಿಗಳು, ಬಳ್ಳಾರಿಯ 9 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply