ಬೆಂಗಳೂರು ಸ್ಫೋಟದ ಶಂಕಿತನಿಗೆ ಕಲಬುರಗಿಯಲ್ಲಿ ಹುಡುಕಾಟ!

masthmagaa.com:

ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತನ ಬೇಟೆಯಲ್ಲಿರೋ 10 ಸದಸ್ಯರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇದೀಗ ಕರ್ನಾಟಕದ ಕಲಬುರಗಿಗೆ ಕಾಲಿಟ್ಟಿದೆ. ಸ್ಫೋಟ ನಡೆದು 10 ದಿನಗಳೇ ಕಳೆದ್ರು NIA ಬಲೆಗೆ ಬೀಳದ ಶಂಕಿತ ಮಾರ್ಚ್‌ 08ರಂದು ಬಳ್ಳಾರಿಯಲ್ಲಿ ಕಾಣಿಸ್ಕೊಂಡಿದ್ದಾನೆ. ಇದಕ್ಕೂ ಮೊದಲು ಈತ ಮಾರ್ಚ್‌ 1 ರಂದು ಅಂದ್ರೆ ಸ್ಫೋಟಗೊಂಡ ದಿನದಂದೇ ಬಳ್ಳಾರಿ ಬಸ್‌ ಸ್ಟ್ಯಾಂಡ್‌ನಲ್ಲಿ CCTV ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ. ಈ ವೇಳ ಶಂಕಿತ ಬಸ್‌ ಸ್ಟ್ಯಾಂಡ್‌ನಲ್ಲೇ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡಿದ್ದಾನೆ. ನಂತ್ರ ಕಲಬುರಗಿಗೆ ಹೋಗೋ KA-32-F-1885 ಬಸ್‌ ಹತ್ಕೊಂಡು ಈ ಅಪರಿಚಿತರು ಹೋಗಿದ್ದಾರೆ. ಇದ್ರಲ್ಲಿ ಒಬ್ಬಾತ ಕಲಬುರಗಿಯ ರಾಮ ಮಂದಿರ್‌ ಸರ್ಕಲ್‌ನಲ್ಲಿ ಇಳಿದಿದ್ದಾನೆ ಮತ್ತೊಬ್ಬ ಅಲ್ಲಿನ ಸೆಂಟ್ರಲ್‌ ಬಸ್‌ ಸ್ಟ್ಯಾಂಡ್‌ನಲ್ಲಿ ಇಳಿದಿದ್ದಾನೆ. ಹೀಗಂತ ಅಧಿಕಾರಿಗಳು ಈಗ ಮಾಹಿತಿ ನೀಡಿದ್ದಾರೆ. ಸೋ ಶಂಕಿತನ ಬೆನ್ಹತ್ತಿದ್ದ NIA ತಂಡ ಇದೀಗ ಕಲಬುರಗಿ ಕಡೆ ಪ್ರಯಾಣ ಬೆಳಸಿದೆ. NIA ತಂಡ ಕಲಬುರಗಿಗೆ ಆಗಮಿಸಿರೋ ಬಗ್ಗೆ ಅಲ್ಲಿನ ಪೊಲೀಸ್‌ ಮುಖ್ಯಸ್ಥ ಆರ್‌ ಚೇತನ್‌ ಕನ್ಫರ್ಮ್‌ ಮಾಡಿದ್ದಾರೆ. ʻಆದ್ರೆ NIA ತಂಡ ತಮ್ಮ ತನಿಖೆ ಬಗ್ಗೆ ಸದ್ಯ ಯಾವ್ದೇ ಮಾಹಿತಿ ನೀಡಿಲ್ಲʼ ಅಂತ ಹೇಳಿದ್ದಾರೆ.

ಇನ್ನೊಂದ್ಕಡೆ ಶಂಕಿತನ ಹುಡುಕಾಟ ಸಂಬಂಧ ಇದೀಗ ಮತ್ತೊಂದು ಇಂಟ್ರೆಸ್ಟಿಂಗ್‌ ಮಾಹಿತಿ ಸಿಕ್ಕಿದೆ. ಶಂಕಿತನ ಐಡೆಂಟಿಟಿ ಪತ್ತೆಹಚ್ಚಲು ಇದೀಗ NIA ತಂಡಕ್ಕೆ ಟೋಪಿ ಸಹಾಯ ಮಾಡಲಿದೆ. ಎಸ್‌ ಟೋಪಿ ಹಾಕೊಂಡು ಜುಮ್‌ ಅಂತ ಕೆಫೆಯೊಳಗೆ ಬಂದು ಸ್ಫೋಟವಿಟ್ಟು ಕಾಲ್ಕಿತ್ತ ಶಂಕಿತನ ಅದೇ ಟೋಪಿ ಈಗ ಪೊಲೀಸರ ಕೈಸೇರಿದೆ. ಕೆಫೆಯಿಂದ ಹೊರಬಂದ ಶಂಕಿತ ಸುಮಾರು 3 ಕಿಮೀ ಸಾಗಿದ ನಂತ್ರ…ಒಂದ್ಕಡೆ ಬ್ರೇಕ್‌ ತಗೊಂಡು ತನ್ನ ಉಡುಪನ್ನ ಬದಲಾಯಿಸಿದ್ದ ಅನ್ನೋ ಮಾಹಿತಿ ಗೊತ್ತೇ ಇದೆ. ಆದ್ರೆ ಈ ವೇಳೆ ಈತ ಪೊಲೀಸ್‌ ತನಿಖೆಗೆ ಸ್ವಲ್ಪ ಈಸಿ ಆಗ್ಲಿ ಅಂತಾನೋ.. ಏನೋ… ಗೊತ್ತಿಲ್ಲ ಟೋಪಿಯನ್ನ ಅಲ್ಲೇ ಮರೆತು….ತನಗೆ ತಾನೇ ಟೋಪಿ ಹಾಕೊಂಡಿದ್ದಾನೆ. ಇದೀಗ ಈ ಟೋಪಿ ಪೊಲೀಸರ ತನಿಖೆಗೆ ಹೆಲ್ಪರ್‌ ಆಗಿ ಕೆಲಸ ಮಾಡಲಿದೆ. ಈ ಟೋಪಿಯಲ್ಲಿ ಶಂಕಿತನ ಹೇರ್‌ ಸ್ಯಾಂಪಲ್‌ ಇರೋದನ್ನ ಫೋರೆನ್ಸಿಕ್‌ ಎಕ್ಸ್‌ಪರ್ಟ್‌ಗಳು ಕನ್ಫರ್ಮ್‌ ಮಾಡಿದ್ದಾರೆ. ಈ ಮೂಲಕ ಶಂಕಿತನ ಡಿಎನ್‌ಎ ಪಡೆದು…ಆತನ ಐಡೆಂಟಿಟಿ ಗೊತ್ತು ಮಾಡಲು ಸಹಾಯವಾಗಲಿದೆ. ಶಂಕಿತ ಸಿಕ್ಕ ಬಳಿಕ ಈ ಡಿಎನ್‌ಎಯಿಂದ ಕನ್ಫರ್ಮ್‌ ಮಾಡೋಕೂ ಈಸಿಯಾಗಲಿದೆ.

-masthmagaa.com

Contact Us for Advertisement

Leave a Reply