ಭಾರತ-ಕೆನಡಾ ಸಂಘರ್ಷ ತೀವ್ರ! ಮೋದಿ-ಜೈಶಂಕರ್‌ ತುರ್ತು ಸಭೆ!

masthmagaa.com:

ಖಲಿಸ್ತಾನಿ ವಿಚಾರವಾಗಿ ಭಯೋತ್ಪಾದಕರಿಗೆ ಸಪೋರ್ಟ್‌ ಮಾಡಿ, ಭಾರತದ ಜೊತೆಗಿನ ಸಂಬಂಧ ಹದಗೆಡಿಸಿಕೊಂಡಿರೋ ಕೆನಡಾ ಇದೀಗ ಭಾರತದಲ್ಲಿ ಭದ್ರತೆ ಸರಿ ಇಲ್ಲ ಹೋಗಬೇಡಿ ಅಂತ ತನ್ನ ಪ್ರಜೆಗಳಿಗೆ ಅಡ್ವೈಸರಿ ಹೊರಡಿಸಿದೆ. ಅದ್ರಲ್ಲೂ ಮುಖ್ಯವಾಗಿ ಜಮ್ಮು ಕಾಶ್ಮೀರವನ್ನ ಉಲ್ಲೇಖಿಸಿರುವ ಕೆನಡಾ, ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದೆ. ಹಿಂಸಾತ್ಮಕ ಪ್ರತಿಭಟನೆಗಳು, ನಾಗರಿಕ ಅಶಾಂತಿ ಮತ್ತು ಭಯೋತ್ಪಾದನೆ ಮತ್ತು ಉಗ್ರಗಾಮಿ ಕೃತ್ಯಗಳ ಹೆಚ್ಚಿನ ಅಪಾಯಗಳಿವೆ ಅಂತ ಸೂಚನೆಯಲ್ಲಿ ಹೇಳಿದೆ. ಭದ್ರತಾ ಪಡೆಗಳ ವಿರುದ್ಧ ಭಯೋತ್ಪಾದಕ ದಾಳಿಗಳು ಆಗ್ತಿದ್ದು, ಅದ್ರಿಂದ ನಾಗರಿಕರ ಸಾವುನೋವುಗಳಿಗೆ ಕಾರಣವಾಗಿವೆ. ಯಾವುದೇ ಸಮಯದಲ್ಲಿ ಹೆಚ್ಚಿನ ದಾಳಿಗಳು ನಡೆಯಬಹುದು. ಹೀಗಾಗಿ ಪ್ರಯಾಣಿಸದಂತೆ ಎಚ್ಚರ ವಹಿಸಿ ಅಂತ ಹೇಳಿದೆ. ತನ್ನ ದೇಶದಲ್ಲೇ ಭಯೋತ್ಪಾದಕರಿಗೆ ಆಶ್ರಯ ಕೊಟ್ಟು ಅವರನ್ನ ಸಪೋರ್ಟ್‌ ಮಾಡ್ತಿರುವ ಕೆನಡಾ ಭಾರತದ ಭದ್ರತೆ ಬಗ್ಗೆ ಮಾತಾಡಿ ಮತ್ತಷ್ಟು ಕೆರಳಿಸುವ ಕೆಲಸ ಮಾಡಿದೆ. ಇತ್ತ ಕೆನಡಾ ಹಾಗೂ ಭಾರತ ನಡುವೆ ಉದ್ವಿಗ್ನತೆ ಹೆಚ್ಚಾಗ್ತಿದ್ದಂತೆ ಈ ಕುರಿತು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವ್ರು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ತುರ್ತು ಸಭೆ ನಡೆಸಿದ್ದಾರೆ. ಈ ವೇಳೆ ಆಗ್ತಿರೋ ಬೆಳವಣಿಗೆ ಬಗ್ಗೆ ವಿವರಿಸಿದ್ದಾರೆ.

ಮತ್ತೊಂದು ಕಡೆ ತಮ್ಮ ನೆನ್ನೆಯ ಹೇಳಿಕೆಯಿಂದ ಯೂಟರ್ನ್‌ ಹೊಡೆದಿರೋ ಕೆನಡ ಪ್ರಧಾನಿ ಜಸ್ಟಿನ್‌ ಟ್ರುಡು, ನಾವು ಭಾರತವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿಲ್ಲ, ಅಥವಾ ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಯೋಚಿಸುತ್ತಿಲ್ಲ. ಆದರೆ ಈ ಸಮಸ್ಯೆಯನ್ನ ಪರಿಹರಿಸಬೇಕು ಎಲ್ಲವನ್ನೂ ಕ್ಲಿಯರ್‌ ಮಾಡಿಕೊಳ್ಳಬೇಕು ಅಂತ ಬಯಸ್ತೀವಿ ಅಂತ ಹೇಳಿದ್ದಾರೆ. ಜೊತೆಗೆ ನಾವು ಈಗಾಗಲೇ ಈ ಮ್ಯಾಟರ್‌ನ್ನ ಸೀರಿಯಸ್‌ ಆಗಿ ತೆಗೆದುಕೊಂಡಿದ್ದೀವಿ. ಭಾರತ ಸರ್ಕಾರ ಕೂಡ ಬಹಳ ಗಂಭೀರವಾಗಿ ಪರಿಗಣಿಸಬೇಕು. ಭಾರತದೊಂದಿಗೆ ನಾವು ಕೆಲಸ ಮಾಡ್ಬೇಕು ಅಂತ ಬಯಸ್ತೀವಿ ಅಂತ ಹೇಳಿದ್ದಾರೆ. ಅಂದ್ಹಾಗೆ ಖಲಿಸ್ತಾನ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಅಂತ ನೆನ್ನೆ ಜಸ್ಟಿನ್‌ ಟ್ರುಡು ಆರೋಪಿಸಿದ್ದರು. ಭಾರತ ಇದನ್ನ ತೀವ್ರವಾಗಿ ವಿರೋಧಿಸಿದ್ದು, ಆರೋಪವನ್ನ ತಳ್ಳಿ ಹಾಕಿತ್ತು. ಅತ್ತ ಕೆನಡಾ ವಿರೋಧ ಪಕ್ಷದ ನಾಯಕ ಪಿಯರಿ ಪೊಯಿಲೊವ್ರೆ ಈ ಬಗ್ಗೆ ಮಾತಾಡಿದ್ದು, ಮೊದಲು ಟ್ರುಡು ಅವರು ತಮ್ಮ ಬಳಿ ಇರುವ ಎಲ್ಲಾ ಎವಿಡೆನ್ಸ್‌ ಹಾಗೂ ಫ್ಯಾಕ್ಟ್‌ಗಳನ್ನ ಇಟ್ಕೊಂಡು ಬಂದು ಮಾತಾಡ್ಲಿ ಅಂತ ಹೇಳಿದ್ದಾರೆ. ಈ ರೀತಿ ಜಡ್ಟ್‌ಮೆಂಟ್‌ ಮಾಡುವ ಮೊದಲು ನಾವು ಎಲ್ಲಾ ರೀತಿಯ ಎವಿಡೆನ್ಸ್‌ಗಳನ್ನ ನೋಡಬೇಕಾಗುತ್ತೆ. ಆದ್ರೆ ಟ್ರುಡು ಅವ್ರು ಯಾವುದೇ ಫ್ಯಾಕ್ಟ್‌ನ್ನ ನೀಡದೇ ಕೇವಲ ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದೆ ಅಂತ ಪಿಯರಿ ಹೇಳಿದ್ದಾರೆ.

ಇನ್ನೊಂದ್‌ ಕಡೆ ಟ್ರುಡು ಹೇಳಿಕೆ ಬೆನ್ನಲ್ಲೇ ಕೆನಡಾದಲ್ಲಿರುವ ಖಲಿಸ್ತಾನಿ ಉಗ್ರರು ಮತ್ತೆ ಬಾಲ ಬಿಚ್ಚಿದ್ದಾರೆ. ಕೆನಡಾದಲ್ಲಿರುವ ಭಾರತೀಯ ಹಿಂದೂಗಳು ಕೂಡಲೇ ಕೆನಡಾ ಬಿಟ್ಟು ಹೋಗಿ. ನೀವು ಕೇವಲ ಭಾರತವನ್ನ ಸಪೋರ್ಟ್‌ ಮಾಡ್ತಿಲ್ಲ ಅದರ ಜೊತೆಗೆ ಖಲಿಸ್ತಾನ ಪರ ಬೆಂಬಲಿಗರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ಹತ್ತಿಕ್ಕುತ್ತಿದ್ದೀರ ಅಂತ ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯ ನಾಯಕ ಗುರುಪತ್ವಂತ್‌ ಪಣ್ಣುನ್‌ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಕೆನಡಾದಲ್ಲಿರುವ ಹಿಂದೂ ಸಂಘಟನೆ Hindus for Harmony ವಕ್ತಾರ ವಿಜಯ್‌ ಜೈನ್‌ ಅನ್ನೋರು ಕಳವಳ ವ್ಯಕ್ತಪಡಿಸಿದ್ದಾರೆ. ಈಗ ನಾವು ಸಂಪೂರ್ಣವಾಗಿ ಹಿಂದೂಫೋಬಿಯಾವನ್ನ ಫೇಸ್‌ ಮಾಡ್ತಿದಿವಿ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೊಂದ್‌ ಕಡೆ ಟ್ರುಡು ಅವರು ಭಾರತದ ಮೇಲೆ ಈ ಆರೋಪ ಮಾಡುವ ಮೊದಲು ಅಮೆರಿಕ ಸೇರಿದಂತೆ ತನ್ನ ಮಿತ್ರರಾಷ್ಟ್ರಗಳ ಬಳಿ ನಿಜ್ಜರ್‌ ಹತ್ಯೆ ಬಗ್ಗೆ ಖಂಡಿಸುವಂತೆ ಕೇಳಿಕೊಂಡಿದ್ದರು ಅಂತ ವರದಿಯಾಗಿದೆ. ಆದ್ರೆ ಜಾಗತಿಕವಾಗಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತಿರುವ ಭಾರತದ ಜೊತೆಯಲ್ಲಿ ಉತ್ತಮ ಸಂಬಂಧ ಮೆಂಟೇನ್‌ ಮಾಡಲು ಪ್ರಯತ್ನಿಸುತ್ತಿರುವ ಅಮೆರಿಕ ಈ ವಿಚಾರವನ್ನ ಪ್ರಸ್ತಾಪ ಮಾಡಲು ಹಿಂಜರಿದಿತ್ತು ಅಂತ ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ. ಇನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ UNGAದ ಬದಿಯಲ್ಲಿ ಜಸ್ಟಿನ್‌ ಟ್ರುಡು ಮತ್ತೆ ಕೆನಡಾದ ವಿದೇಶಾಂಗ ಸಚಿವೆ ಮೆಲನಿ ಜೋಲಿ ತನ್ನ G7 ಮಿತ್ರರನ್ನ ಭೇಟಿ ಮಾಡಲಿದ್ದಾರೆ. ಈ ವೇಳೆ ತನ್ನ ಇಂಟಲಿಜೆನ್ಸ್‌ ಶೇರಿಂಗ್‌ ಮಿತ್ರತಂಡ Five Eyes ಇದ್ರಲ್ಲಿ ಅಮೆರಿಕ, ಬ್ರಿಟನ್‌, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಇವೆ. ಸೋ ಈ ಗ್ರೂಪ್‌ ಜೊತೆಗೆ ಕೆನಡಾ ತನ್ನ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನ ಶೇರ್‌ ಮಾಡ್ಬಹುದು ಎನ್ನಲಾಗ್ತಿದೆ. ಇದುವರೆಗು ಈ ದೇಶಗಳು ಕೆನಡಾ ಆರೋಪಕ್ಕೆ ಸಂಬಂಧಿಸಿದಂತೆ ತುಂಬಾ ಬ್ಯಾಲೆನ್ಸ್ಡ್‌ ಆಗಿ ಹೇಳಿಕೆ ನೀಡಿವೆ. ಒಂದ್ವೇಳೆ ಈ ಸಭೆಯಲ್ಲಿ ಕ್ರೆಡಿಬಲ್‌ ಎವಿಡೆನ್ಸ್‌ ಏನಾದ್ರು ಕೊಟ್ರೆ ಮಾತ್ರ ಈ ವಿಚಾರದಲ್ಲಿ ಮುಂದುವರೆಯಬಹುದು ಅಂತ ತಜ್ಞರು ಅನಲೈಜ್‌ ಮಾಡ್ತಿದ್ದಾರೆ.-masthmagaa.com

Contact Us for Advertisement

Leave a Reply